ಆಯಾಗಾರರ ಮಾಹಿತಿ ಡಿಸಿಗೆ ಸಲ್ಲಿಕೆ

august 28 kottur 04
Published on

ಕೊಟ್ಟೂರು: ತಾಲೂಕಿನ ಚಿರಬಿ ಮತ್ತು ರಾಂಪುರ ನಡುವೆ ಇರುವ ವಿವಾದಾತ್ಮಕ ಶ್ರೀ ಮೂಗಬಸವೇಶ್ವರ ದೇವಸ್ಥಾನದ ಮೂಲ ಮತ್ತು ನೈಜ ಆಯಾಗಾರರ ಪತ್ತೆಗಾಗಿ ತಹಸೀಲ್ದಾರ್ ಜಿ.ಕೆ.ಅಮರೇಶ ಹಲವು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಧಿಕಾರಿಗೆ ವರದಿ ಕಳುಹಿಸಿದ್ದಾರೆ.

ಚಿರಬಿ ಮತ್ತು ರಾಂಪುರ ಗ್ರಾಮಸ್ಥರು ಜಿಲ್ಲಾಧಿಕಾರಿ ಕೋರ್ಟ್‌ನಲ್ಲಿ ಶ್ರೀ ಮೂಗಬಸವೇಶ್ವರ ದೇವಾಲಯದ ಆಯಗಾರರು ನಾವೇ ಎಂದು ವ್ಯಾಜ್ಯ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿ ಆದೇಶದ ಅನ್ವಯ ತಹಸೀಲ್ದಾರ್ ಜಿ.ಕೆ.ಅಮರೇಶ, ರಾಂಪುರ, ಚಿರಬಿ, ಗಂಗಮ್ಮನಹಳ್ಳಿ, ಬೋರನಹಳ್ಳಿ, ಶಿರನಾಯ್ಕನಹಳ್ಳಿ ಸೇರಿದಂತೆ ಇತರ ಹಳ್ಳಿಗಳಿಗೆ ತೆರಳಿ ಮಾಹಿತಿ ಪಡೆದರು. ವಿವಾದದ ಕುರಿತು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಎಸ್.ಎಂ. ದಿವಾಕರ ಎರಡು ಸಾರಿ ವಿಚಾರಣೆ ನಡೆಸಿದ್ದಾರೆ. ದೇವಾಲಯದ ಮೇಲೆ ಹಕ್ಕು ಸಾಧಿಸಲು ಎರಡು ಗ್ರಾಮಸ್ಥರ ನಡುವೆ ವ್ಯಾಜ್ಯದಿಂದ 18 ವರ್ಷದಿಂದ ರಥೋತ್ಸವ ಜರುಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net