ಆಯನೂರು ಸಮೀಪ ಚಿಪ್ಪುಹಂದಿ ರಕ್ಷಣೆ

ANR WEBBB
Published on

ಆಯನೂರು: ಇಲ್ಲಿಗೆ ಸಮೀಪದ ಚಾಮುಂಡಿಪುರದಲ್ಲಿ ಗ್ರಾಮಸ್ಥರು ಚಿಪ್ಪು ಹಂದಿಯನ್ನು ಹಿಡಿದು ಅರಣ್ಯ ಸಿಬ್ಬಂದಿಗೆ ಒಪ್ಪಿಸಿದರು. ಗ್ರಾಮಸ್ಥರೆಲ್ಲ ಬನ್ನಿ ಮುಡಿದು ದೇವಸ್ಥಾನದ ಬಳಿ ಪೂಜೆ ಸಲ್ಲಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಸಮೀಪದ ಗೋಡೋನ್‌ನಲ್ಲಿ ನಿರಂತರ ಶಬ್ದ ಕೇಳಿದ್ದು ಹೋಗಿ ನೋಡಿದಾಗ ಚಿಪ್ಪುಹಂದಿ ಕಂಡು ಬಂದಿದೆ. ಕೂಡಲೆ ಆಗಮಿಸಿದ ಸಿಬ್ಬಂದಿ ಸುರಕ್ಷಿತವಾಗಿ ಹಿಡಿದು ಕಾಡಿನಲ್ಲಿ ಬಿಟ್ಟು ಬಂದರು. ಚಿಪ್ಪುಹಂದಿ ಅಪರೂಪದ ಪ್ರಾಣಿಯಾಗಿದ್ದು ಮಂಡಘಟ್ಟ ಕಿರು ಅರಣ್ಯ ಪ್ರದೇಶದಿಂದ ಬಂದಿರಬಹುದು. ಬೇರೆ ಪ್ರಾಣಿಗಳತರಹ ಕಚ್ಚುವುದಿಲ್ಲ. ಬಹು ನಾಚಿಕೆಯ ಪ್ರಾಣಿ, ಸಸ್ಯಹಾರಿಯಾಗಿದೆ ಎಂದು ಆಯನೂರು ವಲಯ ಅರಣ್ಯಾಧಿಕಾರಿ ಗೀತಾ ವಿ.ನಾಯ್ಕ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net