ಆಮಿಷಕ್ಕೆ ಒಳಗಾಗದೇ ಮತದಾನ ಮಾಡಿ

dc-harishkumar
Published on

ಮುಂಡಗೋಡ: ಚುನಾವಣೆ ಸಿಬ್ಬಂದಿಗೆ ವ್ಯಾಪಕವಾದ ತರಬೇತಿ ನೀಡಲಾಗಿದ್ದು ಮತಗಟ್ಟೆಗೆ ಹೋಗುವ ಮುನ್ನ ಇನ್ನೊಮ್ಮೆ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ನೋಡಿಕೊಳ್ಳಬೇಕು. ಮತಗಟ್ಟೆಗೆ ಬರುವಾಗ ಐಡಿ ಕಾರ್ಡ್ ತರಬೇಕು. ಯಾವುದೇ ಗೊಂದಲ ಬೇಡ. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ನೈತಿಕತೆಯಿಂದ ಮತದಾನ ಮಾಡಬೇಕು. ಪಕ್ಷದ ಪ್ರಭಾವದ ಮೇಲೆ ಯಾವುದೇ ಅಭ್ಯರ್ಥಿ ಮತ ಕೇಳಬಾರದು. 70ವರ್ಷಗಳಿಂದ ಚುನಾವಣೆ ಮಾಡುತ್ತಿದ್ದೇವೆ. ಪ್ರಜ್ಞಾವಂತ ಮತದಾರರು ಇರುವ ಜಿಲ್ಲೆ ಇದು ಎಂದರು. ತಹಸೀಲ್ದಾರ್ ಶ್ರೀಧರ ಮುಂದಲಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net