ಆಮಿಷ ಬಿಡಿ, ಅಭಿವೃದ್ಧಿಗೆ ಮತ ಕೊಡಿ- ಶಿವಶಂಕರಪ್ಪ

ss.jpg
Published on

ದಾವಣಗೆರೆ: ಮತದಾರರು ಚುನಾವಣೆಗಳಲ್ಲಿ ಹಣ ಇತರೆ ಆಮಿಷಗಳಿಗೆ ಬಲಿಯಾಗದೆ ಅಭಿವೃದ್ಧಿ ಪರ ಕೆಲಸಗಾರರಿಗೆ ಮತ ಚಲಾಯಿಸಬೇಕೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.

ದಾವಣಗೆರೆಯ 20ನೇ ವಾರ್ಡ್‍ನಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಎಚ್.ಕೆ.ಆರ್.ನಗರದ ವಿವಿಧೆಡೆ ಸಿ.ಸಿ.ಚರಂಡಿ, ಉದ್ಯಾನ ಅಭಿವೃದ್ಧಿ ಮತ್ತು ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಬರುವ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಕೆಲವರು ಅಪಪ್ರಚಾರ ನಡೆಸಿ ಮತ ಗಿಟ್ಟಿಸುವ ಕೆಲಸ ಮಾಡಲಿದ್ದಾರೆ. ಅಂತಹವರಿಗೆ ಮಾನ್ಯತೆ ನೀಡದೆ ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದರು.

ಪಾಲಿಕೆ ಸದಸ್ಯರಾದ ಶಿವಲೀಲಾ ಕೊಟ್ರಯ್ಯ, ಮೀನಾಕ್ಷಿ ಜಗದೀಶ್ ಮಾತನಾಡಿದರು.

. 21ನೇ ವಾರ್ಡ್‍ನಲ್ಲಿ ಲೋಕೋಪಯೋಗಿ ಇಲಾಖೆಯಡಿ ಅಣ್ಣಾನಗರದಲ್ಲಿ ಸಿ.ಸಿ.ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂನಿಪೂಜೆ ನೆರವೇರಿಸಕಾಯಿತು.

ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ್, ಮುಖಂಡರುಗಳಾದ ವೆಂಕಟೇಶ ನಾಯ್ಕ, ಹದಡಿ ನಿಂಗಪ್ಪ, ಗಣೇಶ್ ಹುಲ್ಮನಿ, ಇಟ್ಟಿಗುಡಿ ಮಂಜುನಾಥ್, ರಾಜಶೇಖರ ಗೌಡ್ರು, ಎನ್.ಎಂ.ಕೊಟ್ರಯ್ಯ, ಜಗದೀಶ್, ಹರೀಶ್ ಕೆ.ಎಲ್. ಬಸಾಪುರ, ರೇವಣಸಿದ್ದಯ್ಯ, ಶಿವಣ್ಣ, ಕಡೆಶಪ್ಪ, ಮಲ್ಲೇಶಪ್ಪ, ಪ್ರಭು ಮಾಸ್ಟರ್, ಹನುಮಂತಪ್ಪ, ಲಕ್ಷ್ಮಮ್ಮ, ಸೀತಮ್ಮ, ಸರೋಜಮ್ಮ, ಲೊಕೋಪಯೋಗಿ ಇಲಾಖೆಯ ಹಾಲಸ್ವಾಮಿ, ಸ್ಮಾರ್ಟ್‌ ಸಿಟಿ ನಿರ್ದೇಶಕ ಎಂ.ನಾಗರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net