ಆಮರಣ ಉಪವಾಸ ಕೈಗೊಳ್ಳುವ ಎಚ್ಚರಿಕೆ

web3
Published on

ಬೈಲಹೊಂಗಲ: ಮನೆ ಹಕ್ಕು ಪತ್ರಕ್ಕಾಗಿ 18 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮುಂದಿನ ಒಂದು ವಾರದೊಳಗೆ ನ್ಯಾಯ ಸಿಗದಿದ್ದರೆ ಆಮರಣ ಉಪವಾಸ ಕೈಗೊಳ್ಳುವುದಾಗಿ ಹರಳಯ್ಯ ಕಾಲನಿ ನಿವಾಸಿಗಳು ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿ ಎಚ್ಚರಿಸಿದರು.

40 ವರ್ಷಗಳಿಂದ ಪುರಸಭೆಯ ಜಾಗದಲ್ಲಿ ಮನೆ ಕರ ತುಂಬುತ್ತ ವಾಸಿಸುತ್ತಿದ್ದೇವೆ. ನಮ್ಮ ಕಾಲನಿ ಸ್ಲಂ ಬೋರ್ಡ್ ವ್ಯಾಪ್ತಿಯಲ್ಲಿ ಪಡೆಯಲು ಪುರಸಭೆ ಠರಾವಿಸಿ ಸ್ಲಂ ಬೋರ್ಡ್‌ಗೆ ಕಳಿಸಿದೆ. ಆದರೂ, ಸ್ಲಂ ಬೋರ್ಡ್‌ನವರು ನಮಗೆ ಹಕ್ಕು ಪತ್ರ ವಿತರಿಸುತ್ತಿಲ್ಲ ಎಂದು ಆರೋಪಿಸಿದರು.

ಹಲವಾರು ಬಾರಿ ನಮ್ಮ ಪ್ರತಿಭಟನೆ ಭರವಸೆ ನೀಡಿ, ಪ್ರತಿಭಟನೆ ಹತ್ತಿಕ್ಕಲಾಗುತ್ತಿದೆ. ಇಲ್ಲಿಯವರೆಗೆ ಸ್ಥಳೀಯ ಶಾಸಕರು ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪರಶುರಾಮ ರಾಯಬಾಗ, ಭರಮಪ್ಪ ತೋರಗಲ, ರಾಮು ಕಳಮಕರ, ಜಾವೇದ್ ಸಯ್ಯದ್, ನಾರಾಯಣ ಖಳಮಕರ, ನಾಗರಾಜ ಅಗಾಸಿ, ಮೈಮೂನಸಾ ವತ್ತಿಗೇರಿ, ಈರವ್ವ ದಳವಾಯಿ, ಖುರ್ಷಿದ್‌ಬಾನು ಸಯ್ಯದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net