ಆಪ್ತಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

Published on

ಚಾಮರಾಜನಗರ: ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ವತಿಯಿಂದ ಡೆಸಿಗ್ನೇಟೆಡ್ ಎಸ್.ಟಿ.ಐ/ಆರ್.ಟಿ.ಐ ಕ್ಲಿನಿಕ್ ಚಾಮರಾಜನಗರ ಜಿಲ್ಲಾ ಆಸ್ಪತ್ರೆ ಮತ್ತು ಉಪವಿಭಾಗ ಆಸ್ಪತ್ರೆ, ಕೊಳ್ಳೇಗಾಲದಲ್ಲಿ ಖಾಲಿ ಇರುವ 2 ಎಸ್.ಟಿ.ಐ ಆಪ್ತಸಮಾಲೋಚಕರ ಹುದ್ದೆಗಳನ್ನು ರೋಸ್ಟರ್ (ಪ.ಜಾತಿ-1, ಸಾಮಾನ್ಯ-1) ಕಮ್ ಮೆರಿಟ್ ಮೂಲಕ ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಪ್ತಸಮಾಲೋಚಕರ 02 ಹುದ್ದೆಗೆ ಪರಿಶಿಷ್ಟ ಜಾತಿ-1, ಸಾಮಾನ್ಯ ವರ್ಗ -1 ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜಿಲ್ಲಾಡಳಿತ ಭವನದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನ. 7 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನೇರ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆ ನಡೆಯಲಿದ್ದು, ಸಂದರ್ಶನಕ್ಕೆ ಅಭ್ಯರ್ಥಿಗಳು ಸ್ವ-ವಿವರದ ದಾಖಲೆ, ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಸಂಬಂಧಪಟ್ಟ ಪದವಿ, ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು, ಅನುಭವ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ, ಕಂಪ್ಯೂಟರ್ ಸರ್ಟಿಫಿಕೇಟ್, ಎಲ್ಲಾ ದಾಖಲೆಗಳ ಒಂದು ಜೆರಾಕ್ಸ್ ಪ್ರತಿಯನ್ನು ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕೆಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net