ಆಪ್ ಪ್ರಣಾಳಿಕೆ ಸಿದ್ಧತೆ ಸಭೆ

h21-vikas soppin
Published on

ಹುಬ್ಬಳ್ಳಿ: ನಗರದ ಗೋಕುಲ ರಸ್ತೆ ಯಾತ್ರಿ ಹೋಟೆಲ್​ನಲ್ಲಿ ಡಿ. 24ರಂದು ಬೆಳಗ್ಗೆ 11 ಗಂಟೆಗೆ ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ರೈತ ಘಟಕದ ವತಿಯಿಂದ ರೈತರ ಪುನಶ್ಚೇತನ ಹಾಗೂ ಪ್ರಣಾಳಿಕೆ ಸಿದ್ಧತೆ ಸಭೆ ಆಯೋಜಿಸಲಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿಕಾಸ ಸೊಪ್ಪಿನ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕಾನೂನು ಕೋಶದ ಬ್ರಿಜೇಶ ಕಾಳಪ್ಪ, ಸಂಘಟನಾ ಕಾರ್ಯದರ್ಶಿ ರವಿಚಂದ್ರ ನೆರಬೆಂಚಿ ಪಾಲ್ಗೊಳ್ಳುವರು. ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಜಿಲ್ಲೆಯಿಂದ ಪಕ್ಷದ ಇಬ್ಬರು, ರಾಜ್ಯದ ಪ್ರತಿ ಜಿಲ್ಲೆಯಿಂದ ಪಕ್ಷದ ಒಬ್ಬರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ವೈಜ್ಞಾನಿಕವಾಗಿ ಬೆಳೆ ವಿಮೆ ನಿಗದಿಪಡಿಸುವ, ಶಾಶ್ವತ ಖರೀದಿ ಕೇಂದ್ರ ತೆರೆಯುವ, ರೈತರ ಆದಾಯ ಹೆಚ್ಚಿಸುವ ನೀತಿಗಳು, ಇತ್ಯಾದಿ ಕೃಷಿ ಸಂಬಂಧಿ ವಿಷಯಗಳು ಚರ್ಚೆಗೆ ಬರಲಿವೆ. ಪ್ರತಿ ಜಿಲ್ಲೆಯ ಪ್ರತಿನಿಧಿಗಳು ತಮ್ಮ ಜಿಲ್ಲೆಯ ಭೌಗೋಳಿಕ ಹಿನ್ನೆಲೆಯಲ್ಲಿ ಕೃಷಿ ಸಂಬಂಧಿ ಪರಿಹಾರಗಳನ್ನು ಸೂಚಿಸಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ರಚಿಸಲಿರುವ ಪ್ರಣಾಳಿಕೆಯಲ್ಲಿ ಕೃಷಿ ವಿಷಯಗಳಿಗೆ ಹೆಚ್ಚಿನ ಮಹತ್ವ ಸಿಗಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net