ಆಪರೇಷನ್ ಸಿಂಧೂರ ಸಂಭ್ರಮಾಚರಣೆ

unnamed
Published on

ಚಾಮರಾಜನಗರ: ಆಪರೇಷನ್ ಸಿಂಧೂರ ಸಂಭ್ರಮಾಚರಣೆ ಪ್ರಯುಕ್ತ ನಗರದ ಕೊಳದ ಬೀದಿ ಬಳಿಯ ಮಂಟೇಸ್ವಾಮಿ ದೇವಸ್ಥಾನದ ಮುಂದೆ ಪಟಾಕಿ ಸಿಡಿಸಿ, ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.

ಇದೇ ವೇಳೆ ನಗರಸಭೆ ಮಾಜಿ ಸದಸ್ಯ ಸುಂದರ್ ರಾಜ್ ಮಾತನಾಡಿ, ಪಾಕಿಸ್ತಾನದಲ್ಲಿ ಉಗ್ರರ ನೆಲೆಯಾಗಿದ್ದ ಮಸೀದಿಯ ಮೇಲೆ ಭಾರತೀಯ ಸೇನೆ ದಾಳಿ ಮಾಡಿರುವುದಕ್ಕೆ ವಿಜಯೋತ್ಸವ ಆಚರಣೆ ಮಾಡಿದ್ದೇವೆ ಎಂದು ಹೇಳಿದರು. ಮುಖಂಡ ಸಿ.ಬಿ.ಸೂರ್ಯಕುಮಾರ್ ಮಾತನಾಡಿ, ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಮುಂದೆ ದೇಶದ ಸೈನಿಕರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಳ್ಳೆಯದಾಗಲಿ. ಹೆಚ್ಚಿನ ಶಕ್ತಿ, ಆರೋಗ್ಯ ನೀಡಲಿ ಎಂದು ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಂಭ್ರಮಾಚರಣೆ ಅಂಗವಾಗಿ ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಲಾಯಿತು ಎಂದು ತಿಳಿಸಿದರು.

ಚಂದ್ರಶೇಖರ್ ರಾವ್, ಭಕ್ತಿ ರಾಜು, ಕೂಸಣ್ಣ, ರಮೇಶ್ ನಾಯಕ್, ರಾಜೇಂದ್ರ, ಕೃಷ್ಣ, ನಾಗೇಂದ್ರ ಬಾಬು, ಅಭಿ, ನಾರಾಯಣ್, ಭಾಸ್ಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net