ಆಪರೇಷನ್ ಸಿಂಧೂರ ದೇಶದ ಹೆಮ್ಮೆಯ ಪ್ರತೀಕ

19 HANUR 2
Published on

ಹನೂರು: ತಾಲೂಕಿನ ಕಣ್ಣೂರು ಗ್ರಾಮದಲ್ಲಿ ಭೀಮ ಬಳಗದ ವತಿಯಿಂದ ಅಪರೇಷನ್ ಸಿಂಧೂರ ಹೆಸರಿನಲ್ಲಿ ಆಯೋಜಿಸಿದ್ಧ ಸಮಾನತೆ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಯಗಳಿಸಿದ ತಂಡಕ್ಕೆ ಸೋಮವಾರ ಬಿಜೆಪಿ ಹನೂರು ಮಂಡಲಾಧ್ಯಕ್ಷ ಕೆ.ಪಿ ವೃಷಭೇಂದ್ರಸ್ವಾಮಿ ಅವರು ಟ್ರೋಪಿ ವಿತರಿಸಿದರು.

ಎರಡು ದಿನಗಳ ಕಾಲ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗ್ರಾಮದ ಭೀಮ ಬಾಯ್ಸ, ಜೈಭೀಮ್ ವಾರಿಯರ್ಸ್‌, ಲೋಕಲ್ ಬಾಯ್ಸ, ಕ್ಯಾಪ್ಟನ್ ಆಫ್ ಕಣ್ಣೂರು ಹಾಗೂ ರಾಯಲ್ ಚಾಲೆಂಜರ್ಸ್‌ ಕಣ್ಣೂರು ತಂಡಗಳು ಭಾಗವಹಿಸಿದ್ದವು. ಸೋಮವಾರ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಭೀಮ ಬಾಯ್ಸ ಹಾಗೂ ಲೋಕಲ್ ಬಾಯ್ಸ ತಂಡ ಸೆಣಸಾಟ ನಡೆಸಿದವು. ನಿಗದಿತ 8 ಓವರ್‌ಗಳಲ್ಲಿ ಲೋಕಲ್ ಬಾಯ್ಸ 5 ವಿಕೆಟ್ ಕಳೆದುಕೊಂಡು 60 ರನ್ ಗಳಿಸಿದರೆ, ಭೀಮ ಬಾಯ್ಸ ತಂಡ 3 ವಿಕೆಟ್ ಕಳೆದುಕೊಂಡು 62 ರನ್ ಗಳಿಸುವುದರ ಮೂಲಕ ಪ್ರಥಮ ಸ್ಥಾನ ಗಳಿಸಿತು.

ಪ್ರಥಮ ಸ್ಥಾನ ಪಡೆದ ಭೀಮ ಬಾಯ್ಸ, ದ್ವಿತೀಯ ಸ್ಥಾನ ಗಳಿಸಿದ ಲೋಕಲ್ ಬಾಯ್ಸ ಹಾಗೂ ತೃತೀಯ ಸ್ಥಾನ ಪಡೆದ ರಾಯಲ್ ಚಾಲೆಂಜರ್ಸ್‌ ತಂಡಕ್ಕೆ ಕೆ.ಪಿ. ವೃಷಭೇಂದ್ರಸ್ವಾಮಿ ಅವರು ಟ್ರೋಫಿಯನ್ನು ವಿತರಿಸಿದರು. ಕ್ರೀಡಾಭಾವನೆ ಬೆಳೆಸಿಕೊಳ್ಳಿ: ಈ ವೇಳೆ ಕೆ.ಪಿ.ವೃಷಭೇಂದ್ರಸ್ವಾಮಿ ಅವರು ಮಾತನಾಡಿ, ಪಾಕಿಸ್ತಾನ ಭಯೋತ್ಪಾದಕರು ಪೆಹಲ್ಗಾಮ್ ದಾಳಿ ನಡೆಸಿದರು. ಇದರ ಪ್ರತೀಕಾರವಾಗಿ ದೇಶದ ಯೋಧರು ಅಪರೇಷನ್ ಸಿಂಧೂರ ಆಪರೇಷನ್ ಕಾರ್ಯಾಚರಣೆ ಕೈಗೊಂಡು ಯಶಸ್ಸು ಸಾಧಿಸುವುದರ ಮೂಲಕ ಪಾಕಿಸ್ತಾನಿಗಳ ಹುಟ್ಟಡಗಿಸಿದರು. ದೇಶದ ಸೈನಿಕರು ಶೌರ್ಯವನ್ನು ಮೆರೆದರು. ಆಪರೇಷನ್ ಸಿಂಧೂರ ಕಾರ್ಯಾಚರಣೆ ದೇಶದ ಹೆಮ್ಮೆಯ ಪ್ರತೀಕ. ಈ ದೆಸೆಯಲ್ಲಿ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಇದರಿಂದ ಸ್ಪರ್ಧಾ ಭಾವನೆ ಬೆಳೆಸಲು ಸಹಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಸಾಧನೆಗೈದು ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಬಿಜೆಪಿ ಬೂತ್ ಅಧ್ಯಕ್ಷ ಮಲ್ಲೇಶ್, ಗ್ರಾಮ ಪಂಚಾಯಿತಿ ಸದಸ್ಯ ನಟರಾಜು, ಮುಖಂಡರಾದ ಕಿರಣ್, ಆನಂದ್, ಮನೋಜ್, ನಿಶಾಂತ್, ಅಭಿಷೇಕ್, ಸೋಮಣ್ಣ, ಬಸವಣ್ಣ, ಶಿವಕುಮಾರ್, ಮಹೇಶ್, ಗುರುಲಿಂಗಸ್ವಾಮಿ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net