ಆಪರೇಷನ್ ಸಿಂಧೂರ ಅಭಿಮಾನದ ಧ್ಯೋತಕ

27 KAMPLI 02
Published on

ಕಂಪ್ಲಿ: ಪಟ್ಟಣದಲ್ಲಿ ಜಿಟಿಜಿಟಿ ಮಳೆ ನಡುವೆ ಬಿಜೆಪಿ ಮಂಡಲ ಘಟಕ ಹಾಗೂ ನಾಗರಿಕರ ವೇದಿಕೆಯಿಂದ ಸೋಮವಾರ ತಿರಂಗಾ ಯಾತ್ರೆ ನಡೆಯಿತು.

ಅಂಬೇಡ್ಕರ್ ವೃತ್ತದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರು ಆಪರೇಷನ್ ಸಿಂಧೂರ ಮೂಲಕ ಉಗ್ರರಿಗೆ ತಕ್ಕ ಉತ್ತರ ನೀಡಿದ್ದಾರೆ. ಇದು ಭಾರತೀಯರ ಅಭಿಮಾನದ ಧ್ಯೋತಕವಾಗಿದ್ದು, ಬಿಜೆಪಿ ಮತ್ತು ಪರಿವಾರದ ಸಂಘಟನೆಗಳ ನೇತೃತ್ವದಲ್ಲಿ ದೇಶಾದ್ಯಂತ ತಿರಂಗಾ ಯಾತ್ರೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ತಿರಂಗ ಯಾತ್ರೆ ಡಾ.ರಾಜಕುಮಾರ್ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಸಂಪನ್ನಗೊಂಡಿತು. ಮಂಡಲ ಅಧ್ಯಕ್ಷ ಸಿ.ಡಿ.ಮಹದೇವ, ಪ್ರಮುಖರಾದ ಅಳ್ಳಳ್ಳಿ ವೀರೇಶ್, ಪಿ.ಬ್ರಹ್ಮಯ್ಯ, ಜಿ.ಶ್ರೀನಿವಾಸ್, ವಿ.ಎಲ್.ಬಾಬು, ಎಸ್.ಎಂ.ನಾಗರಾಜ್, ಟಿ.ವಿ.ಸುದರ್ಶನ್ ರೆಡ್ಡಿ, ರಮೇಶ ಹೂಗಾರ್, ರಾಮಾಂಜಿನಿ, ಕೊಡಿದಲ ರಾಜು, ರವಿ, ವಿರೂಪಾಕ್ಷಿ, ವೀರೇಶ್, ಪಿ.ಶಂಭುಲಿಂಗ, ಗುರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net