ಆಪರೇಷನ್ ಒಂಟಿ ಸಲಗ

18 jyp 1 web
Published on

ಜಯಪುರ: ಮೇಗುಂದಾ ಹೋಬಳಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿರುವ ಒಂಟಿ ಸಲಗವನ್ನು ಸೆರೆಹಿಡಿಯಲು ಶಿವಮೊಗ್ಗದ ಸಕ್ರೆಬೈಲ್ ಬಿಡಾರದ ನಾಲ್ಕು ಆನೆಗಳನ್ನು ಕರೆತರಲಾಗಿದೆ. 11 ಮಾವುತರು, ಇಬ್ಬರು ಪಶುವೈದ್ಯರನ್ನೊಳಗೊಂಡ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆ ಹಿಡಿಯಲು ಯೋಜನೆ ರೂಪಿಸಿದ್ದಾರೆ. ಸಾಕಾನೆಗಳು ಹೇರೂರು ಗ್ರಾಪಂನ ಎಲೆಮಡಿಲು ಬಳಿ ಬೀಡುಬಿಟ್ಟಿವೆ. ಆ.19ರಂದು ಮತ್ತೊಂದು ಆನೆ ಬಂದ ನಂತರ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಕೊಪ್ಪ ಆರ್​ಎಫ್​ಒ ಪ್ರವೀಣ್​ಕುಮಾರ್ ತಿಳಿಸಿದ್ದಾರೆ.

ಹಾಡುಗಾರು, ನೀರ್ಕಟ್ಟು, ಎಲೆಮಡಿಲು, ಶಂಕರಕುಡಿಗೆ, ಹೊನ್ನಗುಂಡಿ, ಅಲಗೇಶ್ವರ, ಚೌಡಿಕಟ್ಟೆ, ಬೊಮ್ಮನಕುಡಿಗೆ, ಹಿರೇಗದ್ದೆ ಗ್ರಾಮಗಳ ವ್ಯಾಪ್ತಿಯಲ್ಲಿ ತೋಟಗಳಿಗೆ ನುಗ್ಗಿ ಸಲಗ ಬೆಳೆಹಾನಿ ಮಾಡುತ್ತಿದ್ದುದರಿಂದ ಸೆರೆಹಿಡಿಯಲು ಇಲಾಖೆ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net