ಆಪಟ್ಟೀರ ಟಾಟು ಮೊಣ್ಣಪ್ಪ ಮಾಯಮುಡಿ ಗ್ರಾಪಂ ಅಧ್ಯಕ್ಷ

ಮಾಯಮುಡಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಪಟ್ಟೀರ ಟಾಟು ಮೊಣ್ಣಪ್ಪ ಅವರನ್ನು ಅಭಿನಂದಿಸಿದ ಗ್ರಾಪಂ ಸದಸ್ಯರು ಅಭಿನಂದಿಸಿದರು. ಎಂ.ಪಿ.ಮೀನಾ, ಕೆ.ವಿ.ಸುಮಿತ್ರಾ, ರವಿ ಮತ್ತಿತರರು ಇದ್ದರು.
27 gkl 03
Published on

ಗೋಣಿಕೊಪ್ಪ: ಮಾಯಮುಡಿ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ, ಉಪಾಧ್ಯಕ್ಷರಾಗಿ ಪಿ.ಎಸ್. ಶಾಂತಾ ಗುರುವಾರ ಅವಿರೋಧವಾಗಿ ಆಯ್ಕೆಯಾದರು.


15 ಸದಸ್ಯರ ಬಲಾಬಲ ಹೊಂದಿರುವ ಗ್ರಾಪಂ ಹಿಂದಿನ ಅಧ್ಯಕ್ಷರಾದ ಎಂ.ಪಿ.ಮೀನಾ, ಉಪಾಧ್ಯಕ್ಷರಾದ ಕೆ.ವಿ.ಸುಮಿತ್ರಾ ಅವರ ಅವಧಿ ಜು.20ಕ್ಕೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಎರಡನೇ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರನ್ನು ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.


ಚುನಾವಣಾಧಿಕಾರಿಯಾಗಿ ಮೀನುಗಾರಿಕೆ ಇಲಾಖೆಯ ನಿರ್ದೇಶಕ ಸಚಿನ್ ಕಾರ್ಯನಿರ್ವಹಿಸಿದರು. ನಿರ್ಗಮಿತ ಅಧ್ಯಕ್ಷೆ ಎಂ.ಪಿ.ಮೀನಾ, ಉಪಾಧ್ಯಕ್ಷೆ ಕೆ.ವಿ.ಸುಮಿತ್ರಾ, ಸದಸ್ಯರಾದ ಆಪಟ್ಟೀರ ವಿಠಲ ನಾಚಯ್ಯ, ಟಿ.ಸಿ.ನಾರಾಯಣ, ಕೆ.ಕೆ.ಶಭರೀಷ್, ವಲಯ ಕಾಂಗ್ರೆಸ್ ಅಧ್ಯಕ್ಷರಾರ ಸಿ.ಕೆ.ಚಿಣ್ಣಪ್ಪ, ಸಣ್ಣುವಂಡ ಎಂ.ವಿಶ್ವನಾಥ್, ನಾಮೇರ ನರೇಶ್ ವಿಶ್ವನಾಥ್, ಆಪಟ್ಟೀರ ಅರುಣ, ಆಪಟ್ಟೀರ ಅಯ್ಯಪ್ಪ, ಸಿದ್ದಪ್ಪ, ಎಚ್.ಆರ್.ಸುಶೀಲಾ, ವಿನೋದ್‌ಕುಮಾರ್ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net