ಆನ್‌ಲೈನ್‌ನಲ್ಲಿ ೫೬.೨೪ ಲಕ್ಷ ವಂಚನೆ

Published on

ಬಳ್ಳಾರಿ : ಇಲ್ಲಿನ ಬಸವೇಶ್ವರ ನಗರದ ಮೆಡಿಕಲ್ ಸ್ಟೋರ್ ಮಾಲೀಕರೊಬ್ಬರು ಆನ್‌ಲೈನ್‌ನಲ್ಲಿ ೫೬.೨೪ ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ. ಈ ಕುರಿತು ಬಳ್ಳಾರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಂ ನೋಡುತ್ತಿರುವಾಗ ಒಂದು ವರ್ಕ್ ಫಮ್ ಹೋಂ ಎಂದು ಯಾಡ್ ಬಂದಿದ್ದುನ್ನು ನೋಡಿ, ಲೈಕ್ ಮಾಡಿದೆ. ನಂತರ ಟೆಲಿಗ್ರಾಂನಲ್ಲಿ ಮಾಯ ಎಂಬ ಹೆಸರಿನಿಂದ ವ್ಯಕ್ತಿ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ, ಬಾನ್ವಾಯ್ ಮ್ಯಾರಿಯೇಟ್ ಕಂಪನಿಯಲ್ಲಿ ಕೆಲಸ ಮಾಡಲು ಇಚ್ಛೆ ಇದೇನಾ ಎಂದು ಚಾಟ್ ಮಾಡಿದ್ದರು. ಪಾರ್ಟಟೈಂ ಕೆಲಸ ಮಾಡುವುದಾಗಿ ಹೇಳಿದಾಗ ಅವರ ಸಿನೀಯರ್ ಏಜೆಂಟ್ ರಾಜೇಶ್ ಕನನ್ ಅವರನ್ನು ಪರಿಚಯ ಮಾಡಿಕೊಟ್ಟಿರು. ನಂತರ ಪಾರ್ಟಟೈಂ ಕೆಲಸಕ್ಕೆ ಆನ್‌ಲೈನ್ ತರಬೇತಿ ನೀಡಿ, ಪಾರ್ಟಟೈಂ ಕೆಲಸ ಕೊಡುವುದಾಗಿ ನಂಬಿಸಿ, ಒಟ್ಟು ರೂ,೫೬,೨೪,೧೬೬ ರೂ. ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಬಸವೇಶ್ವರ ನಗರದ ಮೆಡಿಕಲ್ ಸ್ಟೋರ್ ಮಾಲೀಕರೊಬ್ಬರು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net