ಆನ್‌ಲೈನ್‌ನಲ್ಲಿ 9.50 ಲಕ್ಷ‌ ರೂ. ವಂಚನೆ

Published on

ಬಳ್ಳಾರಿ : ಆನ್‌ಲೈನ್‌ನಲ್ಲಿ ವಹಿವಾಟು ಮಾಡಿದರೆ ನಿತ್ಯ ಲಾಭಾಂಶ ನೀಡುವ ಆಮಿಷವೊಡ್ಡಿ ನಗರದ ಮಹಿಳೆಯೊಬ್ಬರಿಗೆ 9.50 ಲಕ್ಷ ರೂ. ವಂಚಿಸಲಾಗಿದೆ.
ಇತ್ತೀಚೆಗೆ ಅಪರಿಚತ ಸಂಖ್ಯೆಯಿಂದ ಮಹಿಳೆಗೆ ಕರೆ ಮಾಡಿದ್ದ ಭವಾನಿಶಂಕರ್‌ ಎಂಬಾತ ತಾನು ಹೇಳಿದಂತೆ ವಹಿವಾಟು ಮಾಡಿದರೆ ನಿತ್ಯವೂ ಶೇ 1ರಷ್ಟು ಲಾಭಾಂಶ ನೀಡುವುದಾಗಿ ಹೇಳಿದ್ದ. ಅದಕ್ಕಾಗಿ ಮಹಿಳೆಯನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ವೊಂದಕ್ಕೆ ಸೇರಿಸಲಾಗಿತ್ತು. ಅದರಲ್ಲಿ ಹೇಳಿದಂತೆ ಮಹಿಳೆಯು ವಂಚಕರಿಗೆ ಹಂತ ಹಂತವಾಗಿ ವಿವಿಧ ಖಾತೆಗಳ ಮೂಲಕ ಹಣ ಸಂದಾಯ ಮೋಸ ಎಸಗಿದ್ದಾರೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net