ಆನ್‌ಲೈನ್‌ನಲ್ಲಿ 40.96 ಲಕ್ಷ ರೂ. ವಂಚನೆ

Published on

ಬಳ್ಳಾರಿ : ಇಲ್ಲಿನ ರಾಘವೇಂದ್ರ ಕಾಲನಿಯ ಜಿಂದಾಲ್ ಕಂಪನಿಯ ಗುತ್ತಿಗೆದಾರನೊಬ್ಬ ಅಧಿಕ ಲಾಭಾಂಶ ಪಡೆಯುವ ಉದ್ದೇಶದಿಂದ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ 40.96 ಲಕ್ಷ ರೂ. ಆನ್‌ಲೈನ್‌ನಲ್ಲಿ ಕಳೆದುಕೊಂಡಿದ್ದಾನೆ.
ಅಪರಿಚಿತನೊಬ್ಬ ವಾಟ್ಸ್‌ಪ್‌ನಲ್ಲಿ ಯುಎಸ್ ಸ್ಟಾಕ್ ಮತ್ತು ಐಪಿಒಎಸ್‌ನಲ್ಲಿ ಹೂಡಿಕೆ ಮಾಡಿದರೆ ಶೇ. 10 ರಷ್ಟು ಲಾಭಾಂಶ ಪಡೆಯುವುದಾಗಿ ನಂಬಿಸಿದ್ದಾರೆ. ಗುತ್ತಿಗೆದಾರನು ಆ. 09 ರಿಂದ ಸೆ. 09ರವರೆಗೆ ಹಂತ ಹಂತವಾಗಿ ಒಟ್ಟು 40.96 ಲಕ್ಷ ರೂ. ಜಮೆ ಮಾಡಿದ್ದಾನೆ. ಅಪರಿಚಿತನಿಂದ ಯಾವುದೆ ಮೆಸಜ್ ಬಾರದೆ ಇರುವುದರಿಂದ ಆನ್‌ಲೈನ್ ವಂಚನೆಗೆ ಒಳಗಾಗಿರುವುದು ತಿಳಿದಿದೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net