ಆನ್‌ಲೈನ್‌ನಲ್ಲಿ 17 ಲಕ್ಷ ರೂ. ವಂಚನೆ

Published on

ಬಳ್ಳಾರಿ : ತಾಲೂಕಿನ ಜಿಂದಾಲ್ ವಿದ್ಯಾನಗರ ನಿವಾಸಿ ಮಹಿಳೆಯೊಬ್ಬರು ಆನ್ ಲೈನ್ ನಲ್ಲಿ 17 ಲಕ್ಷ ರೂ. ವಂಚನೆಗೊಳಗಿದ್ದಾರೆ.
ಮಹಿಳೆ ನಿವೇಶನ ಖರೀದಿಗೆಂದು 5.50 ಲಕ್ಷ ರೂ. ಬ್ಯಾಂಕ್‌ನಿಂದ ಸಾಲ ಪಡೆದು ಅದನ್ನು ಖಾತೆಯಲ್ಲೇ ಉಳಿಸಿದ್ದರು. ಬಳಿಕ ಚಿನ್ನ ಅಡವಿಟ್ಟ 3.62 ಲಕ್ಷ ರೂ. ಖಾತೆಯಲ್ಲೇ ಇಟ್ಟಿದ್ದರು. ಆನ್‌ಲೈನ್‌ ವಂಚಕರೂ ಈ ಹಣವನ್ನೂ ಕಬಳಿಸಿದ್ದಾರೆ. ಜತೆಗೆ ಮಹಿಳೆ ಹೆಸರಲ್ಲಿ 2.50 ಲಕ್ಷ ರೂ. ಬ್ಯಾಂಕ್‌ ಸಾಲ ಪಡೆದು ಅದನ್ನೂ ಬೇರೆ ಬ್ಯಾಂಕ್‌ಗೆ ವರ್ಗಾಯಿಸಿಕೊಳ್ಳಲಾಗಿದೆ. ಮತ್ತೊಂದು ಖಾತೆಯಲ್ಲೂ ಮಹಿಳೆ ಹೆಸರಲ್ಲಿ 1.18 ಲಕ್ಷ ರೂ. ಬಾಂಕ್‌ ಸಾಲ ಪಡೆದು ಅದನ್ನೂ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಇದೇ ರೀತಿ ತಮ್ಮ ವಿವಿಧ ಖಾತೆಗಳಿಂದಲೂ, ವಿವಿಧ ದಿನ ಹಣ ಕಬಳಿಸಲಾಗಿದೆ. ತಮ್ಮ ಮೊಬೈಲ್‌ ಅನ್ನು ಹ್ಯಾಕ್‌ ಮಾಡಿ, ಒಟಿಪಿಗಳನ್ನು ಆಟೋ ಫಾರ್ವಡ್‌ ಮಾಡಿಕೊಂಡು ಒಟ್ಟಾರೆ 17,02,365 ರೂ. ಹಣವನ್ನು ತಮಗೆ ವಂಚಿಸಲಾಗಿದೆ ಎಂದು ಮಹಿಳೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net