ಆನ್‌ಲೈನ್ ವ್ಯವಹಾರ ಮಾಡುವಾಗ ಜಾಗ್ರತೆ ಇರಲಿ

Be careful when doing business online
Be careful when doing business online
Published on

ಮಹಾಲಿಂಗಪುರ: ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಪೊಲೀಸ್ ಠಾಣೆ ಆಶ್ರಯದಲ್ಲಿ ಸೋಮವಾರ ಕೆಸರಗೊಪ್ಪ, ಮಾರಾಪುರ, ಸಂಗಾನಟ್ಟಿ, ಮದಬಾವಿ, ಢವಳೇಶ್ವರ ಗ್ರಾಮಗಳಲ್ಲಿ ಜಾಗತಿ ಜಾಥಾ ನಡೆಸಿ ರಸ್ತೆ ಸುರಕ್ಷತೆ, ಮಹಿಳೆ ಮತ್ತು ಮಕ್ಕಳ ರಕ್ಷಣೆ ಹಾಗೂ ವಿವಿಧ ಅಪರಾಧಗಳ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗತಿ ಮೂಡಿಸಲಾಯಿತು.

ಠಾಣಾಧಿಕಾರಿ ಕಿರಣ ಸತ್ತಿಗೇರಿ ಮಾತನಾಡಿ, ಆನ್‌ಲೈನ್ ಮೂಲಕ ಮೋಸ ಮಾಡಿ ಸಾರ್ವಜನಿಕರ ಹಣ ಎಗರಿಸುವ ದುರುಳರಿದ್ದು, ಜನರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಬ್ಯಾಂಕ್‌ನಿಂದ ಹಣ ತರುವಾಗ ಜಾಗ್ರತೆ ಇರಲಿ. ಗೋಹತ್ಯೆ ನಿಷೇಧಿಸಲಾಗಿದೆ. ವರ್ಕ್ ್ರಾಮ್ ಹೋಂ ಎಂಬ ವಾಟ್ಸ್ ಆ್ಯಪ್ ಗ್ರೂಪ್ ಬಗ್ಗೆ ಜನತೆ ಎಚ್ಚರದಿಂದಿರಬೇಕು. ಆನಲೈನ್ ವ್ಯವಹಾರಗಳ ಆಸೆಗೆ ಬಿದ್ದು ಹಣ ಕಳೆದುಕೊಳ್ಳಬೇಡಿ ಎಂದರು.

ಪಿಎಸ್‌ಐ ಮಧು ಎಲ್. ಮಾತನಾಡಿ, ಬಾಲ್ಯವಿವಾಹ ಮಾಡುವುದು ಕಾನೂನು ಬಾಹಿರ. ಬಾಲ್ಯವಿವಾಹ ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿ ತಿಳಿಸಬೇಕು ಎಂದರು. ಪೊಲೀಸ್ ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net