

ಬಳ್ಳಾರಿ : ಕಂಪನಿಯ ಬ್ಯಾಂಕ್ ಖಾತೆ ಬದಲಾಯಿಸಿ, ಆನ್‌ಲೈನ್‌ನಲ್ಲಿ ಎರಡು ಕೋಟಿ ರೂ. ಅಧಿಕ ವಂಚಿಸಿದ್ದ ಆರೋಪಿಯನ್ನು ಬಂಧಿಸಿ, 1.49 ಕೋಟಿ ರೂ. ವಶಪಡಿಸಲಾಗಿದೆ ಎಂದು ಎಸ್ಪಿ ಡಾ. ವಿ. ಜೆ. ಶೋಭಾರಾಣಿ ಹೇಳಿದರು.
ನಗರದ ಎಸ್ಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇಲ್ಲಿನ ಹಿಂದೂಸ್ಥಾನ ಕ್ಯಾಲೆನೆಡ್ ಮೆಟಾಲ್ ಪ್ರೈ. ಲಿ. ಕಂಪನಿಯು ಆಗರವಾಲ್ ಕೋಲ್ ಕಾರ್ಪೋರೆಷನ್ ಪ್ರೈ. ಲಿ. ಕಂಪನಿಯಿಂದ ಕೋಲ್ ಖರೀದಿ ಮಾಡುತ್ತಿದ್ದು, ಅವರು ಕೊಟ್ಟ ಬ್ಯಾಂಕ್ ಖಾತೆಗಳಿಗೆ ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡುತ್ತಿದ್ದರು. ಮಧ್ಯಪ್ರದೇಶ ಮೂಲದ ಅಜಯ ಕುಮಾರ ಜೈಸ್ವಾಲ್ ಈ ಮಾಹಿತಿ ಸಂಗ್ರಹಿಸಿ ಕಂಪನಿಯ ಬ್ಯಾಂಕ್ ಖಾತೆ ಬದಲಾವಣೆಯಾಗಿದೆ ಎಂದು ಫೇಕ್ ಇ ಮೇಲ್ ಐಡಿ ಮೂಲಕ ಇಂದು ಸ್ಲಾಂಡ್ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕಳುಹಿಸಿ, 2.11 ಕೋಟಿ ರೂ. ಆನ್‌ಲೈನ್‌ನಲ್ಲಿ ವಂಚಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಸೈಬರ್ ಠಾಣೆಯ ಡಿಎಸ್ಪಿ ಡಾ. ಸಂತೋಷ ಚವ್ಹಾಣ್, ಸಿಪಿಐ ರಮಾಕಾಂತ್ ಹಾಗೂ ಸಿಬ್ಬಂದಿ ಸೇರಿ ಒಟ್ಟು ಆರು ಜನ ಮಧ್ಯಪ್ರದೇಶಕ್ಕೆ ಹೋಗಿ ತಾಂತ್ರಿಕ ಸಹಾಯದೊಂದಿಗೆ ಸಾಕ್ಷೃಗಳನ್ನು ಸಂಗ್ರಹಿಸಿ, ಆರೋಪಿಯನ್ನು ವಶಕ್ಕೆ ಪಡೆದು ನಗದು 1. 21 ಕೋಟಿ ರೂ. ಹಾಗೂ ಆರೋಪಿಯ ಬೇರೆ ಬೇರೆ ಬ್ಯಾಂಕ್ ಖಾತೆಯಲ್ಲಿದ್ದ 27.97 ಲಕ್ಷ ರೂ. ಹಣವನ್ನು ಫ್ರೀಜ್ ಮಾಡಲಾಗಿದೆ ಎಂದರು. ಸೈಬರ್ ಠಾಣೆಯ ಸಿಬ್ಬಂದಿಯ ಕಾರ್ಯಕ್ಕೆ ನಗದು ಬಹುಮಾನ ಘೋಷಿಸಲಾಗಿದೆ ಎಂದರು.