ಆನೆಗೊಳ ಗ್ರಾಪಂಗೆ ಮಹಾಲಕ್ಷ್ಮೀ ಅಧ್ಯಕ್ಷೆ

ಕಿಕ್ಕೇರಿ ಹೋಬಳಿಯ ಆನೆಗೊಳ ಗ್ರಾಪಂಗೆ ಅವಿರೋಧ ಆಯ್ಕೆಯಾದ ಅಧ್ಯಕ್ಷ ಎಲ್.ಪಿ.ಮಹಾಲಕ್ಷ್ಮೀ ವಿಶ್ವನಾಥ್ ಹಾಗೂ ಉಪಾಧ್ಯಕ್ಷ ಎ.ಪಿ.ನಂಜೇಶ್ ಅವರನ್ನು ಶುಕ್ರವಾರ ಬೆಂಬಲಿಗರು ಸನ್ಮಾನಿಸಿದರು. ಮುಖಂಡರಾದ ಸಿ.ಎನ್.ಪುಟ್ಟಸ್ವಾಮಿಗೌಡ, ಬಿ.ಎಂ. ಕಿರಣ್, ಐಕನಹಳ್ಳಿ ಕೃಷ್ಣೇಗೌಡ, ಮಲ್ಲೇಶ್, ಕಾಯಿ ಮಂಜೇಗೌಡ, ಗ್ರಾಪಂ ಸದಸ್ಯರು ಇದ್ದರು.
04kkr1(8-23
Published on

ಕಿಕ್ಕೇರಿ: ಹೋಬಳಿಯ ಗಡಿಭಾಗದ ಆನೆಗೊಳ ಗ್ರಾಪಂ ಅಧ್ಯಕ್ಷರಾಗಿ ಎಲ್.ಪಿ.ಮಹಾಲಕ್ಷ್ಮೀ ವಿಶ್ವನಾಥ್ (ಬಿಸಿಎಂ ಮಹಿಳೆ), ಉಪಾಧ್ಯಕ್ಷರಾಗಿ ಎ.ಪಿ.ನಂಜೇಶ್(ಸಾಮಾನ್ಯ) ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.


ಅಧ್ಯಕ್ಷ ಸ್ಥಾನಕ್ಕೆ ಎಲ್.ಪಿ.ಮಹಾಲಕ್ಷ್ಮೀ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎ.ಪಿ.ನಂಜೇಶ್ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಅವಿರೋಧವಾಗಿ ಆಯ್ಕೆಯನ್ನು ಪ್ರಕಟಿಸಿದರು. ಸಹ ಚುನಾವಣಾಧಿಕಾರಿಯಾಗಿ ಧ್ರುವಕುಮಾರ್, ಪಿಡಿಒ ಕೆ.ಎನ್.ಕುಮಾರ್, ಕಾರ್ಯದರ್ಶಿ ಡಿ.ಲಕ್ಷ್ಮೀ, ಲೆಕ್ಕ ಸಹಾಯಕ ಕೆ.ಪಿ. ನವೀನ್‌ಕುಮಾರ್ ಕರ್ತವ್ಯ ನಿರ್ವಹಿಸಿದರು.


ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿಮಾನಿಗಳು, ಕಾರ್ಯಕರ್ತರು ಪುಷ್ಪಮಾಲೆ ಅರ್ಪಿಸಿ, ಸಿಹಿ ತಿನಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜೆಡಿಎಸ್ ಮುಖಂಡರಾದ ಸಿ.ಎನ್.ಪುಟ್ಟಸ್ವಾಮಿಗೌಡ, ಬಿ.ಎಂ.ಕಿರಣ್, ಐಕನಹಳ್ಳಿ ಕೃಷ್ಣೇಗೌಡ, ಐನೋರಹಳ್ಳಿ ಮಲ್ಲೇಶ್, ಕಾಯಿ ಮಂಜೇಗೌಡ, ದಾನಶೇಖರ್, ಬಿ.ಎಸ್.ಮಂಜುನಾಥ್, ಗ್ರಾಪಂ ಸದಸ್ಯರಾದ ಕಡಹೆಮ್ಮಿಗೆ ರಮೇಶ್, ಬಿ.ಎನ್.ಯೋಗೇಶ್, ಪಿ.ಪ್ರಕಾಶ, ಸಿ.ಆರ್.ಗಂಗಾಧರ್, ಡಿ.ಎಸ್.ಜಗನ್ನಾಥ, ಮಂಜಶೆಟ್ಟಿ, ರಕ್ಷಿತ್, ಧನಲಕ್ಷ್ಮೀ, ವೈ.ಎಲ್. ರುಕ್ಮಿಣಿ, ನಾಗಮ್ಮ, ಭಾಗ್ಯಮ್ಮ, ಲಕ್ಷ್ಮೀ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net