ಆನೆಕಾಲು ರೋಗದ ಬಗ್ಗೆ ಜಾಗೃತಿ ಇರಲಿ

13ydg03
Published on

ಯಾದಗಿರಿ: ಗ್ರಾಮೀಣ ಭಾಗದ ಜನತೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಕಾರಿ ಡಾ.ಲಕ್ಷ್ಮೀಕಾಂತ್ ಒಂಟಿಪೀರ ಕಿವಿಮಾತು ಹೇಳಿದರು.

ಶಹಾಪುರ ತಾಲೂಕಿನ ಶಿರವಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಆನೆಕಾಲು ರೋಗ ನಿಯಂತ್ರಣದ ಸಾಮೂಹಿಕ ಔಷ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ರೋಗ ಜಿಲ್ಲೆಯ 6 ತಾಲೂಕುಗಳಲ್ಲಿ ಫ್ರೀ ಟಾಸ್ (ರೋಗಪ್ರಸರಣ ಸಮೀಕ್ಷೆ) ಕೈಗೊಳ್ಳಲಾಗಿತ್ತು. ಇದರಲ್ಲಿ 4 ತಾಲೂಕುಗಳಲ್ಲಿ ರೋಗ ಪ್ರಸರಣ ಕಡಿಮೆಯಾಗಿರುವುದು ಕಂಡು ಬಂದಿದೆ ಎಂದರು.

ವಡಗೇರಾ ಮತ್ತು ಹುಣಸಗಿ ತಾಲೂಕಿನಲ್ಲಿ ಹೆಚ್ಚಾಗಿ ಕಂಡು ಬಂದಿರುವರಿಂದ ಈ 2 ಬ್ಲಾಕ್ಗಳಲ್ಲಿ ಆ.21ರಿಂದ ಸೆ.09ರ ವರೆಗೆ ಸಾಮೂಹಿಕ ಮಾತ್ರೆ ನುಂಗಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕತರ್ೆಯರು ಶಾಲಾ,ಕಾಲೇಜು, ಅಂಗನವಾಡಿ ಹಾಗೂ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ವರ್ಷಕ್ಕೆ ಎರಡು ಬಾರಿ ಮಾತ್ರೆ ನುಂಗಿಸಲಾಗುತ್ತಿದ್ದು, ಗಬರ್ಿಣಿಯರು, ಬಾಣಂತಿಯರು, 2 ವರ್ಷದೊಳಗಿನ ಮಕ್ಕಳು ಮತ್ತು ರ್ಘ ಅವ ಕಾಯಿಲೆಯಿಂದ ಬಳಲುತ್ತಿರುವವರು ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದುರ

ತಾಲೂಕು ಆರೋಗ್ಯಾಕಾರಿ ಡಾ.ರಮೇಶ ಗುತ್ತೆದಾರ, ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಆರ್ಸಿಎಚ್ ಅಕಾರಿ ಡಾ.ಮಲ್ಲಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಕಾರಿ ತುಳಸಿರಾಮ ಚವ್ಹಾಣ, ಶ್ರೀಕಾಂತ, ವೈದ್ಯಾಕಾರಿ ಡಾ.ಬಸವರಾಜ ಅಂಡಗಿ, ಮುಖ್ಯಗುರು ನಿಂಗಣ್ಣ ಅಂಗಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net