ಆನೆಕಾಲು ರೋಗ ನಿರ್ಮೂಲನೆಗೆ ಸಹಕರಿಸಿ

21-08kodekal02
ಕೊಡೇಕಲ್ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಆನೆಕಾಲು ರೋಗ ನಿರ್ಮೂಲನೆಗೆ ಸಾಮೂಹಿಕ ಮಾತ್ರೆ ಸೇವನೆ ಕಾರ‍್ಯಕ್ರಮ ನಡೆಯಿತು. ಡಾ.ಪವನರಾವ, ಚನ್ನಬಸ್ಸು ನಾಲತವಾಡ, ಶರಣು, ಬಸವರಾಜೇಶ್ವರಿ, ಗೌಡಪ್ಪ ರಾಮನಗೌಡ್ರ, ಸಂಗನಬಸ್ಸು ಪಂಜಗಲ್ ಇತರರಿದ್ದರು.
Published on

ಕೊಡೇಕಲ್: ಪ್ರತಿಯೊಬ್ಬರೂ ಸಾಮೂಹಿಕವಾಗಿ ಮಾತ್ರೆ ಸೇವಿಸುವ ಮೂಲಕ ಆನೆಕಾಲು ರೋಗ ನಿರ್ಮೂಲನೆಗೆ ಸಹಕರಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪವನರಾವ ಮನವಿ ಮಾಡಿದರು.

ಗ್ರಾಮದ ಪ್ಯಾಟಿ ವಲಯದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಸಾಮೂಹಿಕ ಮಾತ್ರೆ ವಿತರಣಾ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಇಲಾಖೆ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ‍್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಾತ್ರೆ ನೀಡುತ್ತಿದ್ದಾರೆ. ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದು ತಿಳಿಹೇಳಿದರು.

ಗ್ರಾಪಂ ಅಧ್ಯಕ್ಷ ಶಿವಶರಣ ಕುಂಬಾರ, ಉಪಾಧ್ಯಕ್ಷೆ ನೀಲಮ್ಮ ದಂಡಾಗೋಳ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸ್ಸು ನಾಲತವಾಡ, ಶರಣು ಬಾದ್ಯಾಪುರ, ಬಸವರಾಜೇಶ್ವರಿ, ಗೌಡಪ್ಪ ರಾಮನಗೌಡ್ರ, ಸಂಗನಬಸ್ಸು ಪಂಜಗಲ್, ಸಂಗಣ್ಣ ಕರಬಸಪ್ಪನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net