ಆನೆ ದಾಳಿಗೆ ಬಲಿಯಾದ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯ.

ಆನೆ ದಾಳಿಗೆ ಬಲಿಯಾದ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯ.
Published on

ಆಲೂರು : ಕಾಡಾನೆ ಮೃತಪಟ್ಟ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವಂತೆ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಮತ್ತು ಪರಿಸರ ಜೀವಿ ಸರ್ಕಾರದ ಅಪರ ಕಾರ್ಯದರ್ಶಿ ಜಾವೀದ್ ಅಖ್ತರ್ ಅವರಿಗೆ ಆಲೂರು ಪಟ್ಟಣದ ರಾಧಮ್ಮ ಜನಸ್ಪಂದನ ಸಂಸ್ಥಾಪಕ ಅಧ್ಯಕ್ಷ ಹೇಮಂತ್ ಕುಮಾರ್ ಅವರು ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ನೂರಾರು ರೈತಾ ಮುಖಂಡರು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಆಲೂರು ತಾಲ್ಲೂಕಿನಲ್ಲಿ ಒಂದು ಕಡೆ ಕಾಡಾನೆ ಸಮಸ್ಯೆಯಾದರೆ ಇನ್ನೊಂದಡೆ ಎತ್ತಿನಹೊಳೆ ಯೋಜನೆಗೆ ರೈತ ತನ್ನ ಜಮೀನು ಕಳೆದುಕೊಂಡು ಪರಿಹಾರಕ್ಕೆ ಕಛೇರಿ ಅಲೆಯುತ್ತಿದ್ದಾರೆ ಈ ಬಗ್ಗೆ ಸರ್ಕಾರ ಹಾಗೂ ಸರ್ಕಾರದ ಜನಪ್ರತಿನಿದಿಗಳು ಯಾವುದೇ ಕ್ರಮಕೈಗೊಳ್ಳದಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು ತಾಲ್ಲೂಕಿನ ಸಾಕಷ್ಟು ಸಮಸ್ಯೆಗಳ ಬಗ್ಗೆ ಹೇಮಂತ್ ಕುಮಾರ್ ರಾಧಮ್ಮ ಜನಸ್ಪಂಧನ ಸಂಸ್ಥೆ ತೆರದು ಪಟ್ಟಣದ ನಿವೇಶನ ರಹಿತ ಬಡವರಿಗೆ ನಿವೇಶನ ಕೊಡಿಸುವ ಬಗ್ಗೆ,ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಓಡಾಡಲು ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸರ್ಕಾರದ ಗಮನ ತರುವ ಬಗ್ಗೆ ಹೀಗೆ ಹತ್ತು ಹಲವು ಸಮಸ್ಯೆಗಳ ಹೋರಾಟ ಕೈಗೆತ್ತಿಕೊಂಡಿದ್ದು ಇದರ ಜೊತೆಗೆ ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದಾರೆ ಅವರಿಗೆ ತಾಲ್ಲೂಕು ರೈತಸಂಘ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.

ರಾಧಮ್ಮ ಜನಸ್ಪಂಧನ ಸಂಸ್ಥೆ ಮುಖ್ಯಸ್ಥ ಹೇಮಂತ್ ಕುಮಾರ್ ಮಾತನಾಡಿ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಕಳೆದರೂ ತಾಲ್ಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ ನನ್ನ ಹೋರಾಟ ಜನಸಾಮಾನ್ಯರ ಪರವಾಗಿದೆ ಚುನಾವಣೆಗಾಗಿ ಬಂದಿದ್ದಾರೆ ಎಂದು ಕೆಲವರು ನನ್ನ ಮನಸ್ಥಿತಿಯನ್ನು ಕುಗ್ಗಿಸಲು ಮುಂದಾಗಿದ್ದಾರೆ ನಾನು ಯಾವುದೇ ಚುನಾವಣೆಗೆ ಬಂದಿಲ್ಲ ನಮ್ಮ ತಾಲ್ಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಸ್ಥರಿಗೆ ಕೇವಲ ಪರಿಹಾರ ನೀಡಿದರೇ ಸಾಲದು ಅವರಿಗೆ ಅನುಕಂಪದ ಅದಾರದಲ್ಲಿ ವಿಧ್ಯಗೆ ತಕ್ಕಂತೆ ಉದ್ಯೋಗ ನೀಡಿ ಎನ್ನುವ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದೇನೆ ಹೊರತು ಇದರಲ್ಲಿ ಯಾವುದೇ ಗಿಮಿಕ್ ಇಲ್ಲ ಸಂಬಂಧಪಟ್ಟ ಇಲಾಖೆ ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ತಿಂಗಳ ಮಾಸಶಾನ ನೀಡಬೇಕು ಅದರೆ ಇದುವರೆವಿಗೂ ಇಲಾಖೆಯಿಂದ ಸಾದ್ಯವಾಗಿಲ್ಲ ಈ ಬಗ್ಗೆ ಹೋರಾಟ ನಿರಂತರವಾಗಿರುತ್ತದೆ ಎಂದರು.

ರೈತಾ ಮುಖಂಡ ಮೋಹನ್ ಮಾತನಾಡಿ ಜಿಲ್ಲೆಯಲ್ಲಿ ಸುಮಾರು 80 ಕುಟುಂಬದ ಮುಖ್ಯಸ್ಥರು ಸಾವಿಗಿಡಾಗಿದ್ದು ಯಾವುದೇ ಕುಟುಂಬಕ್ಕೂ ಸಂಪೂರ್ಣ ಪರಿಹಾರ ದೊರಕಿಲ್ಲ ಸರ್ಕಾರಿ ನೌಕರ ಮೃತಪಟ್ಟರೆ ಅನುಕಂಪದ ಮೇಲೆ ನೌಕರಿ ಕೊಡುತ್ತೀರಾ ಆದರೆ ಬಡ ರೈತ ಮೃತಪಟ್ಟರೆ ಮಾತ್ರ ಸರ್ಕಾರಿ ಹುದ್ದೆ ಕೊಡುವುದಕ್ಕೆ ಹಿಂದೇಟು ಹಾಕುತ್ತಿರುವ ಬಗ್ಗೆ ಅಕ್ರೋಶ ವ್ಯಕ್ತಪಡಿಸಿ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕೆ ಹೊಸಕೋಟೆ ಹೋಬಳಿ ರೈತ ಸಂಘಟನೆ ಅಧ್ಯಕ್ಷ ಮೋಹನ್ ಎಚ್ ಎಸ್. ಕಾರ್ಯದರ್ಶಿ ಜಯಣ್ಣ ಹೈದೂರ್. ಉಪಾಧ್ಯಕ್ಷ ದೀಪಕ್. ಹೊಸಕೋಟೆ ಭಾಗದ ರೈತ ಸಂಘಟನೆಯ ಪದಾಧಿಕಾರಿಗಳು ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net