

ಚಾಮರಾಜನಗರ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಎಟಿಆರ್) ಕಾಡಾನೆ ದಾಳಿಗೆ ಜರ್ಮನ್ ಪ್ರವಾಸಿಗ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತನನ್ನು ಮೈಕೆಲ್ ಶುಲ್ಜ್ (77) ಎಂದು ಗುರುತಿಸಲಾಗಿದೆ, ಟೈಗರ್ ವ್ಯಾಲಿ ಪ್ರದೇಶದ ಘಾಟ್ ರಸ್ತೆಯಲ್ಲಿ ಆನೆ ಇದ್ದರೂ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಆನೆ ದಾಳಿ ನಡೆಸಿದೆ. ಈ ವೇಳೆ ಅವರು ಬೈಕ್‌ನಿಂದ ಕೆಳಗೆ ಬಿದ್ದು ಓಡಿದ್ದಾರೆ. ಇದೇ ಮಾರ್ಗದಲ್ಲಿ ಚಲಿಸುತ್ತಿದ್ದ ಟ್ರಕ್ ಡ್ರೈವರ್ ಆನೆಯ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸಿದರು.
ಗಾಯಗೊಂಡ ಪ್ರವಾಸಿ ಎದ್ದು ಬೈಕ್‌ನತ್ತ ನಡೆದುಕೊಂಡು ಹೋಗುತ್ತಿದ್ದಾಗ ಆನೆ ಮತ್ತೆ ದಾಳಿ ಮಾಡಿ ಕೆಳಗೆ ತಳ್ಳಿ ತನ್ನ ದಂತದಿಂದ ಚುಚ್ಚಿದೆ. ತೀವ್ರವಾಗಿ ಗಾಯಗೊಂಡ ಮೈಕೆಲ್ ಶುಲ್ಜ್ ಅವರನ್ನು ಪ್ರಥಮ ಚಿಕಿತ್ಸೆಗಾಗಿ ಟೀ ಎಸ್ಟೇಟ್‌ವೊಂದರ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಪೊಲ್ಲಾಚಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎನ್ನಲಾಗಿದೆ.