ಆನೆ ದಾಳಿಗೆ 6 ಎಕರೆ ಭತ್ತದ ಬೆಳೆ ನಾಶ

22 YLP 03 A
Published on

ಯಲ್ಲಾಪುರ: ತಾಲೂಕಿನ ಮದನೂರು ಗ್ರಾ.ಪಂ ವ್ಯಾಪ್ತಿಯ ಹುಲಗೋಡಿನಲ್ಲಿ ಬುಧವಾರ ರಾತ್ರಿ ಕಾಡಾನೆಗಳ ಹಿಂಡು ಭತ್ತದ ಗದ್ದೆಗೆ ನುಗ್ಗಿದ್ದು, ಬೆಳೆಯನ್ನು ತುಳಿದು ನಾಶ ಮಾಡಿದೆ. ಹುಲಗೋಡಿನ ವೆಂಕಟ್ರಮಣ ಶಿವರಾಮ ಭಟ್ಟ, ಮಹಾಬಲೇಶ್ವರ ಶಿವರಾಮ ಭಟ್ಟ, ರಾಮಚಂದ್ರ ಶಿವರಾಮ ಭಟ್ಟ, ಕೃಷ್ಣ ಶಿವರಾಮ ಭಟ್ಟ ಮುಂತಾದ ರೈತರ ಹೊಲಗಳಿಗೆ ನುಗ್ಗಿದ 5 ಆನೆಗಳಿರುವ ಹಿಂಡು, 6 ಎಕರೆ ಭತ್ತದ ಗದ್ದೆಯನ್ನು ತುಳಿದು ನಾಶ ಮಾಡಿವೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಹಾನಿಯನ್ನು ಅಂದಾಜಿಸಿ, ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net