

ಆನೆ ದಂತ ಮಾರಾಟ ಯತ್ನ: ಓರ್ವನ ಬಂಧನ
ವಿಜಯವಾಣಿ ಸುದ್ದಿ
ಬೆಳಗಾವಿ :ಬಸವನ ಕುಡಚಿ ಬಸ್ ನಿಲ್ದಾಣ ಹತ್ತಿರ ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ, ಓರ್ವನನ್ನು ಅರಣ್ಯ ಸಂಚಾರಿ ದಳ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ತಾವರಘಟ್ಟದ ಬಾಲಾಜಿ ಎಸ್.(28) ಎಂಬುವನ್ನು ಬಂಧಿತ ಆರೋಪಿ, ಅಕ್ರಮವಾಗಿ ಆನೆ ದಂತಗಳನ್ನು
ಮಾರಾಟ ಮಾಡಲು ಯತ್ನಿಸುತ್ತಿದ್ದ.
ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿ ದಾಳಿ ನಡೆಸಿದ ಪೊಲೀಸರು ಆರೋಪಿಯಿಂದ ಎರಡು ಆನೆಯ ದಂತಗಳನ್ನು ಜಪ್ತಿ ಮಾಡಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ 1972 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.