

ಹಾಸನ (ಆಲೂರು): ತಾಲೂಕಿನ ದೊಡ್ಡಬೆಟ್ಟ ಅರಣ್ಯದ ಸಮೀಪದ ಕಾಡುಭಕ್ತರಳ್ಳಿಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಕಾಡಾನೆ ತುಳಿತಕ್ಕೆ ಬಲಿಯಾಗಿದ್ದಾರೆ.
ಕುಂದೂರು ಹೋಬಳಿ ಕ್ಯಾತನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ಕೆ.ಆರ್‌ಪ್ರಧಾನ (೩೬) ಮೃತ. ಎಂದಿನಂತೆ ಇಂದು ಬೆಳಗ್ಗೆ ತೋಟದ ಕೆಲಸದಲ್ಲಿ ನಿರತನಾಗಿದ್ದಆತನ ಮೇಲೆ ಒಂಟಿಸಲಗವೊಂದು ದಿಢೀರ್ ದಾಳಿ ನಡೆಸಿದೆ. ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಆತನನ್ನು ತುಳಿದು ಸಾಯಿಸಿ ಸಮೀಪದಲ್ಲಿರುವ ಜೋಳದ ಹೊಲದ ತುಂಬೆಲ್ಲ ಶವವನ್ನು ಎಳೆದಾಡಿ ಬಳಿಕ ಮಣ್ಣು ಮುಚ್ಚಿಹೊಗಿದೆ.
ಇದನ್ನು ಕಂಡ ಸ್ಥಳೀಯೊಬ್ಬರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಮೃತನಿಗೆ ಪತ್ನಿ ಮತ್ತು 5 ವರ್ಷದ ಗಂಡು, 2 ವರ್ಷದ ಹೆಣ್ಣು ಮಗು ಇದೆ.