ಆನೆ ಕಾಲು ತಡೆಗೆ ಮಾತ್ರೆ ಸೇವಿಸಿ

29 ard 01
Published on

ಔರಾದ್: ಆನೆಕಾಲು ರೋಗ ಬರದಂತೆ ತಡೆಗಟ್ಟಲು ವರ್ಷದಲ್ಲಿ ಒಂದು ಬಾರಿ ಉಚಿತವಾಗಿ ನೀಡುವ ತ್ರಿವಳಿ ಮಾತ್ರೆಗಳನ್ನು ಸೇವನೆ ಮಾಡಬೇಕು ಎಂದು ಡಾ.ಲಾವಣ್ಯ ನುಡಿದರು. ಸಂತಪುರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಆನೆಕಾಲು ರೋಗ ಮುಕ್ತ ನಿವಾರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರದಿಂದ ಉಚಿತವಾಗಿ ನೀಡುತ್ತಿರುವ ಆನೆ ಕಾಲು ರೋಗ ಮುಕ್ತ ಗುಳಿಗೆಗಳನ್ನು ಎಲ್ಲರೂ ಸೇವಿಸಿ, ರೋಗ ಬರದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಮೂಢನಂಬಿಕೆ ಮಾತುಗಳಿಗೆ ಕಿವಿಗೊಡದೆ ಕಡ್ಡಾಯವಾಗಿ ಎಲ್ಲರೂ ಸೇವಿಸಬೇಕು ಎಂದು ಸಲಹೆ ನೀಡಿದರು. ಪಿಎಸ್‌ಐ ಮಹೇಬೂಬ್ ಅಲಿ ಅವರು ಆನೆ ಕಾಲು ರೋಗ ನಿವಾರಣೆ ಮಾತ್ರ ಸೇವಿಸಿ, ಎಲ್ಲರೂ ಸೇವಿಸಬೇಕು ಎಂದು ಹೇಳಿದರು. ಪ್ರಮುಖರಾದ ದೇವಿದಾಸ, ಬಸವರಾಜ್, ಮಹಿಮುದ್ದೀನ್, ರಾಧಾ, ನಯುಮ್, ಅತಿಕ, ಶೇಷರಾವ, ರವಿ, ರಾಜಕುಮಾರ, ಮಹೇಶ, ಗೌತಮ, ದಿಲೀಪ, ಪ್ರಭು, ರಾಮರಡ್ಡಿ, ರಂಜೀತ, ಅಂಬಿಕಾ, ಶಿವಾನಿ, ತುಕಾರಾಮ ಹಸನ್ಮುಖಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net