ಆನಂದಪುರ: ಶ್ರೀ ಕಡ್ಲೆಹಂಕ್ಲು ಮಾರಿಕಾಂಬಾ ದೇಗುಲ ಕಳಸ ಪ್ರತಿಷ್ಠಾಪನೆ ಸಂಪನ್ನ

ANP WEB
Published on

ಆನಂದಪುರ: ಗ್ರಾಮದೇವತೆ ಶ್ರೀ ಕಡ್ಲೆಹಂಕ್ಲು ಮಾರಿಕಾಂಬಾ ದೇಗುಲದ ನೂತನ ಕಳಸ ಪ್ರತಿಷ್ಠಾಪನಾ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು. ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಗುರುವಾರದಿಂದಲೇ ಧಾರ್ಮಿಕ ಕೈಂಕರ್ಯಗಳು ನಡೆದವು.

ಆಗಮಿಕ ಅರ್ಚಕರ ನೇತೃತ್ವದಲ್ಲಿ ಗುರುವಾರ ಗಣಪತಿ ಪ್ರಾರ್ಥನೆ, ಪುಣ್ಯಾಹ, ಪ್ರಧಾನ ಸಂಕಲ್ಪ, ಮಂಡಲ ದರ್ಶನ, ವಾಸ್ತು ರಾಕ್ಷೋಘ್ನ ಹೋಮ, ಬ್ರಹ್ಮಕಳಸ ಸ್ಥಾಪನೆ, ಆದಿವಾಸ ಪೂಜೆ, ಆದಿವಾಸ ಹೋಮ, ಬಲಿ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಿತು.

ಶುಕ್ರವಾರ ಗುರು ಗಣಪತಿ ಪೂಜೆ, ಆದಿವಾಸ ಪೂಜೆ, ನೂತನ ಕಳಸ ಪ್ರತಿಷ್ಠಾಪನೆ, ಕಲಾಹೋಮ, ಬ್ರಹ್ಮ ಕಳಸಾಭಿಷೇಕ, ಮಹಾಪೂಜೆ, ಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನೆರವೇರಿತು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಕಳಸಕ್ಕೆ ಜಲಾಭಿಷೇಕ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net