ಆನಂದಪುರ: ಕರಡಿಮನೆಯಲ್ಲಿ 3.70 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣಕ್ಕೆ ಹರತಾಳು ಹಾಲಪ್ಪ ಶಂಕುಸ್ಥಾಪನೆ

ANP WEB
Published on

ಆನಂದಪುರ: ಸಾಗರ ತಾಲೂಕಿನ ಗಡಿ ಭಾಗಗಳ ಜನರು ಮೂಲ ಸೌಕರ್ಯಕ್ಕಾಗಿ ಐದಾರು ದಶಕಗಳಿಂದ ಕಾತರಿಸುತ್ತಿದ್ದಾರೆ. ಇದನ್ನು ಮನಗಂಡು ದೊಡ್ಡ ಮೊತ್ತದ ಅನುದಾನವನ್ನು ರಾಜ್ಯ ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಯಡೇಹಳ್ಳಿ ಗ್ರಾಪಂನ ಕರಡಿಮನೆ ಗ್ರಾಮದಲ್ಲಿ ಮಂಗಳವಾರ 3.70 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಸಾಗರ ತಾಲೂಕಿಗೆ ಅತ್ಯಧಿಕ ಕಾಮಗಾರಿ ಮಂಜೂರು ಮಾಡಿಸಿದ ತೃಪ್ತಿ ನನಗಿದೆ. ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ವಿವಿಧ ಕಾಮಗಾರಿ ನಡೆಸಲಾಗಿದೆ. ಗ್ರಾಮದ ಅಭಿವೃದ್ಧಿ ಕಂಡ ಮತದಾರರು ಸಂತೋಷ ಪಡುತ್ತಿದ್ದಾರೆ ಎಂದರು.

ಗಂಟಿನಕೊಪ್ಪದಿಂದ ಇರುವಕ್ಕಿ, ಕರಡಿಮನೆ, ಗೇರುಬೀಸು, ಬಾಳೂರು ಮೂಲಕ ರಿಪ್ಪನ್‌ಪೇಟೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಮತ್ತು ಸೇತುವೆ ಕಾಮಗಾರಿಗೆ ದಶಕಗಳಿಂದ ಒತ್ತಾಯಿಸುತ್ತಿದ್ದರು. ಮುಂದಿನ ವರ್ಷ ಮಾರ್ಚ್‌ನೊಳಗೆ ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ. ಪ್ರತಿ ಹಂತದಲ್ಲೂ ಗುಣಮಟ್ಟ ಕಾಯ್ದುಕೊಳ್ಳಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net