ಆನಂದಪುರ: 14ಕ್ಕೆ ಕಡ್ಲೆಹಕ್ಲು ಮಾರಿಕಾಂಬಾ ದೇಗುಲದ ಕಳಶ ಪ್ರತಿಷ್ಠಾಪನಾ ಮಹೋತ್ಸವ

ANP WEBBB
Published on

ಆನಂದಪುರ: ಗ್ರಾಮದೇವತೆ ಶ್ರೀ ಕಡ್ಲೆಹಕ್ಲು ಮಾರಿಕಾಂಬಾ ದೇಗುಲದ ನೂತನ ಕಳಶ ಪ್ರತಿಷ್ಠಾಪನಾ ಮಹೋತ್ಸವ ಅ.14ರಂದು ಜರುಗಲಿದ್ದು, 13ರಿಂದ ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದವೆ. ಅ.13 ರಂದು ಮಧ್ಯಾಹ್ನ 1.30 ರಿಂದ ಗುರುಗಣಪತಿ ಪ್ರಾರ್ಥನೆ, ಋತ್ವಿಗ್ವರ್ಣನೆ, ಪ್ರಧಾನ ಸಂಕಲ್ಪ, ಮಂಡಲ ದರ್ಶನ, ವಾಸ್ತು ರಾಕ್ಷೋಘ್ನ ಹೋಮ, ಬ್ರಹ್ಮ ಕಳಸ ಸ್ಥಾಪನೆ, ಆದಿವಾಸ ಪೂಜೆ, ಆದಿವಾಸ ಹೋಮ, ಬಲಿ, ಮಹಾ ಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಅ.14 ರಂದು ಬೆಳಗ್ಗೆ 9 ಗಂಟೆಯಿಂದ ಶ್ರೀ ಗುರುಗಣಪತಿ ಪೂಜೆ, ಆದಿವಾಸ ಪೂಜೆ, ನೂತನ ಕಳಶ ಪ್ರತಿಷ್ಠಾಪನೆ ಹಾಗೂ ಕಲಾ ಹೋಮ, ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವಿದ್ದು ಮಧ್ಯಾಹ್ನ 12.30 ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net