

ಹುಬ್ಬಳ್ಳಿ: ಶೇಷಗಿರಿ ಪಾಂಡುರಂಗ ಕಾಮತ ಟ್ರಸ್ಟ್, ಜಯ ಗೋವಿಂದ ಅನಂತ ಟ್ರಸ್ಟ್ ಮತ್ತು ಗೌಡ ಸರಸ್ವತ ಬ್ರಾಹ್ಮಣ ಸಮಾಜ (ಹುಬ್ಬಳ್ಳಿ) ಇವರ ಸಹಯೋಗದಲ್ಲಿ ಹುಬ್ಬಳ್ಳಿಯ ಜೆ.ಸಿ. ನಗರದ ಸರಸ್ವತಿ ಸದನದಲ್ಲಿ ನ. 26ರಿಂದ 30ರವರೆಗೆ ಶ್ರೀ ಸ್ವಾಮಿ ಅನುಭವಾನಂದ ಸರಸ್ವತಿಯವರಿಂದ ಆಧ್ಯಾತ್ಮಿಕ ಪ್ರವಚನ ಏರ್ಪಡಿಸಲಾಗಿದೆ.
ಹಿಂದಿಯಲ್ಲಿ ಪ್ರವಚನ ನೀಡುವರು. ನಿತ್ಯ ಬೆಳಗ್ಗೆ 7ರಿಂದ 8 ಗಂಟೆಯವೆರೆಗೆ ಯೋಗ ವಶಿಷ್ಟ ಹಾಗೂ ಸಂಜೆ 7ರಿಂದ 8.15ರವರೆಗೆ ಭಗವದ್ಗೀತೆ ವಿಷಯ ಕುರಿತು ಮಾತನಾಡುವರು. ಪ್ರವಚನ ಮಾಲಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಬೇಕೆಂದು ಆಯೋಜಕರು ಕೋರಿದ್ದಾರೆ.