

ಬಾಗಲಕೋಟೆ: ಬದುಕಿನ ಅನೇಕ ಏರಿಳಿತಗಳ ನಡುವೆಯೂ ಆಧ್ಯಾತ್ಮ, ಸಂಸ್ಕೃತಿಯನ್ನು ಮರೆಯಬಾರದು. ಆಧ್ಯಾತ್ಮಿಕ ಚಿಂತನೆಯಲ್ಲಿ ನೆಮ್ಮದಿ ಅಡಗಿದೆ. ಅದರಿಂದ ವಿಮುಖವಾಗುವುದು ದುಃಖಕ್ಕೆ ಕಾರಣ ಎಂದು ಎಡತೊರೆಯ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರ ಭಾರತಿ ಶ್ರೀಗಳು ಹೇಳಿದರು.
ಗ್ವಿಜಯ ಯಾತ್ರೆ ಅಂಗವಾಗಿ ನಗರದ ಸೀತಾರಾಮ ಮಂಗಲ ಭವನದಲ್ಲಿ ಶುಕ್ರವಾರ ಚಂದ್ರಮೌಳೇಶ್ವರ ದೇವರಿಗೆ ಮಹಾಪೂಜೆ ಸಲ್ಲಿಸಿದ ಬಳಿಕ ಅನುಗ್ರಹ ಸಂದೇಶ ನೀಡಿದ ಅವರು, ಇಂದು ನಮ್ಮತನ ಬಿಟ್ಟು ದೂರವಾಗುತ್ತಿರುವ ಕಾರಣಕ್ಕೆ ಮನಸ್ಸು ಸಂತೋಷದಿಂದ ಇಲ್ಲ. ಬದುಕು ನೆಮ್ಮದಿಯಾಗಿಲ್ಲ. ಭಾರತದ ಶಕ್ತಿಯೇ ಆಧ್ಯಾತ್ಮ. ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನಾಡಿಗೆ ಹಾಗೂ ಭೂ ಮಂಡಲಕ್ಕೆ ಮನುಕುಲದ ಏಳಿಗೆಗಾಗಿ ಶಂಕರ ಭಗವತ್ಪಾದರು ಶಕ್ತಿಯುತ ಬೀಜಾಕ್ಷರಗಳ ಮೂಲಕ ಮಂತ್ರ, ಸ್ತೋತ್ರಗಳನ್ನು ರಚನೆ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಅವುಗಳ ಪಾಠ, ಬೋಧನೆ ಮಾಡಬೇಕು. ನಿತ್ಯವು ಅವುಗಳ ಪಠಣೆ ಮಾಡುವದರಿಂದ ಶಾಂತಿ, ನೆಮ್ಮದಿ, ಅಂತರ ಶಕ್ತಿ ಹೆಚ್ಚುತ್ತದೆ. ಎಲ್ಲ ವೇದಗಳಲ್ಲಿ ಶಂಕರ ಭಗವತ್ಪಾದರು ನೀಡಿದ ಮಂತ್ರ, ಸ್ತೋತ್ರಗಳು ಮನು ಕುಲದ ಏಳಿಗೆ ಅಡಗಿದೆ ಹಾಗೂ ಮಂಗಳವಾಗುತ್ತದೆ ಎಂದರು. ದಿಗ್ವಿಜಯ ಯಾತ್ರೆ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ನಗರಕ್ಕೆ ಆಗಮಿಸಿದ್ದ ಶ್ರೀಗಳಿಗೆ ಗುರುವಾರ ಸಂಜೆ ಪೂರ್ಣಕುಂಭ ಸ್ವಾಗತ, ವಾದ್ಯ, ವೇದಘೋಷಗಳ ಪಠಣಗಳೊಂದಿಗೆ ಸ್ವಾಗತಿಸಲಾಯಿತು. ಶುಕ್ರವಾರ ಆರಾಧ್ಯ ದೇವರು ಚಂದ್ರಮೌಳೇಶ್ವರ ಸಂಸ್ಥಾನ ಪೂಜೆ ನೆರವೇರಿಸಿದರು. ಭಕ್ತರಿಗೆ -Àಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಪಂಡಿತರಾದ ಶ್ರೀನಿವಾಸಚಾರ್ಯ ಜೋಶಿ, ಆನಂದ ಪುರೋಹಿತ, ಬಿಂದು ಮಾಧವಾಚಾರ್ಯ ನಾಗಸಂಪಗಿ, ಶಿವರಾಮ ಹೆಗಡೆ, ರಮೇಶ ಜೋಶಿ, ವಾಮನರಾವ ಕವಟೇಕರ, ಕಿರಣ ಬಾಗಲಕೋಟೆ, ಟಿ.ಎಸ್.ಕುಲಕರ್ಣಿ, ಡಾ.ಗಿರೀಶ ಮಾಸೂರಕರ, ಪ್ರಸನ್ನ ಭೋಕರೆ, ಆರ್.ವಿ.ದೇಸಾಯಿ, ಶ್ರೀಕಾಂತ ದೇಸಾಯಿ, ಡಾ.ಆನಂದ ಕುಲಕರ್ಣಿ, ಸಂಜೀವ ಪಾಟೀಲ ಸೇರಿದಂತೆ ಶಂಕರ ಸ್ವಾದ್ಯಾಯ ಮಂಡಳಿ, ಶಾರದ ಶಂಕರ ಭಜನಾ ಮಂಡಳಿ, ಶುಕ್ಲ ಯಜುರ್ವೇದಿ ಸಂಘದ ಪದಾಽಕಾರಿಗಳು ಇದ್ದರು.