ಆಧುನಿಕತೆ ಭರಾಟೆಯಿಂದ ಜಾನಪದಕ್ಕೆ ಧಕ್ಕೆ

bhr school
ಬಾಳೆಹೊನ್ನೂರಿನ ಬಿಇಎಸ್ ಆಂಗ್ಲ ಮಾಧ್ಯಮ ಶಾಲೆಗೆ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಸತೀಶ್ ಅರಳೀಕೊಪ್ಪ ಊಟದ ತಟ್ಟೆ ಮತ್ತು ವಿವಿಧ ಪಾತ್ರೆಗಳನ್ನು ಕೊಡುಗೆಯಾಗಿ ನೀಡಿದರು. ಬಿ.ಸಿ.ಗೀತಾ, ಕೆ.ಆರ್.ಭೂದೇಶ, ತಮನ್ನಾ, ಜಯಶ್ರೀ, ಸುಧಾಕರ್ ಇತರರಿದ್ದರು.
Published on

ಬಾಳೆಹೊನ್ನೂರು: ಜಾನಪದ ಸಾಹಿತ್ಯ, ಸಂಸ್ಕೃತಿ ಆಧುನಿಕತೆ ಭರಾಟೆಯಲ್ಲಿ ಮರೆಯಾಗುತ್ತಿದೆ ಎಂದು ಎನ್.ಆರ್.ಪುರ ತಾಲೂಕು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಸತೀಶ್ ಅರಳೀಕೊಪ್ಪ ಹೇಳಿದರು.

ಬಿಇಎಸ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್.ಆರ್.ಪುರ ತಾಲೂಕು ಕರ್ನಾಟಕ ಜಾನಪದ ಪರಿಷತ್ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜಾನಪದ ನೃತ್ಯ, ಜಾನಪದ ಹಾಡುಗಳು ಸಹ ಕ್ಷೀಣಿಸುತ್ತಿವೆ. ಪ್ರತಿಯೊಬ್ಬರೂ ಜಾನಪದ ಕಲೆ ಮಹತ್ವ ತಿಳಿಯುವುದರ ಜತೆಗೆ ಜಾನಪದ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.

ಬಿಇಎಸ್ ಶಾಲೆ ಮಕ್ಕಳಿಗೆ ಪ್ರತಿದಿನ ಶೃಂಗೇರಿ ಶಾರದಾ ಮಠದಿಂದ ಬರುವ ಊಟ ಮಾಡಲು ತಟ್ಟೆಗಳು ಮತ್ತು ಬಡಿಸಲು ಪಾತ್ರೆಗಳ ಅವಶ್ಯಕತೆಯಿದ್ದು, ಇದನ್ನು ಜಾನಪದ ಪರಿಷತ್‌ನಿಂದ ನೀಡಲಾಗುತ್ತಿದೆ ಎಂದು ಹೇಳಿದರು.

ಬಿಇಎಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಸಿ.ಗೀತಾ ಮಾತನಾಡಿ, ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷರು ಕ್ರಿಯಾಶೀಲರಾಗಿದ್ದು, ಸಂಸ್ಥೆ ಬಗ್ಗೆ ಅಪಾರ ಗೌರವ ಇಟ್ಟು ತಟ್ಟೆ ಮತ್ತು ಪಾತ್ರೆಗಳನ್ನು ನೀಡಿದ್ದಾರೆ. ಇದು ಮಕ್ಕಳಿಗೆ ತುಂಬ ಉಪಯುಕ್ತವಾಗಿದೆ. ಸತೀಶ್ ಅವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಸೇವಾ ಕಾರ್ಯಕ್ಕೆ ನಮ್ಮ ಶಾಲೆಯನ್ನು ಆಯ್ಕೆ ಮಾಡಿ ವಿದ್ಯಾರ್ಥಿಗಳ ಏಳಿಗೆಗೆ ಕಾರಣಿಭೂತರಾಗಿದ್ದಾರೆ ಎಂದರು.

ಶಿಕ್ಷಕಿ ತಮನ್ನಾ ಮುನಾವರ್ ಮಾತನಾಡಿ, ವೈಜ್ಞಾನಿಕ ಯುಗದಲ್ಲಿ ಜಾನಪದ ಕಲೆ ಕ್ಷೀಣಿಸುತ್ತಿದೆ. ಜಾನಪದ ಕಲೆ ಎಂಬುದು ಒಂದು ಜೀವಿಗೆ ಶ್ವಾಸಕೋಶದಲ್ಲಿ ಉಸಿರಿನಷ್ಟೇ ಜಗತ್ತಿಗೆ ಜಾನಪದ ಸಾಹಿತ್ಯ ಮುಖ್ಯ ಎಂದರು.

ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷ ಭಟ್, ಪ್ರಾಚಾರ್ಯ ಕೆ.ಆರ್.ಭೂದೇಶ, ಮುಖ್ಯಶಿಕ್ಷಕಿ ಜಯಶ್ರೀ, ಕಜಾಪ ಸಹ ಕಾರ್ಯದರ್ಶಿ ಸುಧಾಕರ್, ಶೇಖರ್ ಇಟ್ಟಿಗೆ, ರೋಟರಿ ಅಧ್ಯಕ್ಷ ಸಿ.ಪಿ.ರಮೇಶ್, ಪ್ರಮುಖರಾದ ಕೆ.ಟಿ.ವೆಂಕಟೇಶ್, ಎಚ್.ಗೋಪಾಲ್, ವಿ.ಅಶೋಕ್, ಒ.ಡಿ.ಸ್ಟೀನ್, ಕೊಟ್ರೇಶಪ್ಪ, ವೀಕ್ಷಿತ್, ಸವಿತಾ, ಅರ್ಪಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net