

ಚಿತ್ರದುರ್ಗ: ಆಧುನಿಕತೆ ಭರಾಟೆಯಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ ಮರೆಯಾಗುತ್ತಿದೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.
ನಗರದ ಐಯುಡಿಪಿ ಬಡಾವಣೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಹಳ್ಳಿಗಳಲ್ಲಿ ಸುಗ್ಗಿ ಸಂಭ್ರಮ ನೋಡಬಹುದಾಗಿತ್ತು. ಕಾಲಾನಂತರದಲ್ಲಿ ತೆರೆಮರೆಗೆ ಸರಿಯುತ್ತಿರುವ ಸಂಕ್ರಮಣದ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ದೇವರಾಜ ಅರಸು ವಿದ್ಯಾಸಂಸ್ಥೆ ಸಿಇಒ ಎಂ.ಸಿ. ರಘುಚಂದನ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಎಲ್. ಪ್ರಶಾಂತ್ ಮಾತನಾಡಿದರು.
ಈ ವೇಳೆ ಅಭಿವೃದ್ಧಿ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಯೋಗೀಶ್ ಅವರನ್ನು ಸನ್ಮಾನಿಸಲಾಯಿತು. ಗಾಯಕ ಮೋಹನ್ ನೇತೃತ್ವದಲ್ಲಿ ರಶ್ಮಿ ಶ್ರೀನಿವಾಸ್, ಸುಮಂತ್‌ವಸಿಷ್ಠ, ಸಾಗರ್ ತುರುವೇಕೆರೆ, ವಿನಯ್‌ಭಾರ್ಗವ, ಚನ್ನಪ್ಪ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಶೋಭಾ ನಿರೂಪಿಸಿದರು. ಸಂಕ್ರಾಂತಿ ಸಂಭ್ರಮ ಸಮಿತಿ ಸಂಚಾಲಕ ಸಿದ್ದರಾಜು ಪ್ರಾಸ್ತಾವಿಕ ಮಾತನಾಡಿದರು.