ಆಧುನಿಕ ಶಿಕ್ಷಣಕ್ಕೆ ಪ್ರಾಮುಖ್ಯ ಸಿಗಲಿ

2
ಅಮಲಝರಿಯ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಕ್ಷಮಾ ಮೆಹ್ತಾ, ಅರ್ಚನಾ ಬುರ್ಜಿ, ಸೀಮಾ ಬಾಗೇವಾಡಿ, ವರ್ಷಾ ನಂದರಗಿ, ಶ್ರುತಿ ಷಾ, ವೈಶಾಲಿ ಪಾಟೀಲ, ಸ್ಮಿತಾ ಷಾ, ಶ್ರೇಯಲ್ ಷಾ ಇತರರು ಇದ್ದರು.
Published on

ಆಧುನಿಕ, ಶಿಕ್ಷಣಕ್ಕೆ, ಪ್ರಾಮುಖ್ಯ, ಸಿಗಲಿ, For modern, education, important, get,
ಬೋರಗಾಂವ: ಪ್ರಪಂಚ ಬದಲಾಗುತ್ತಿದ್ದು ಹೊಸ ಚಟುವಟಿಕೆ ಮತ್ತು ಸಂಶೋಧನೆಗಳು ನಡೆಯುತ್ತಿವೆ. ಹಾಗಾಗಿ, ಆಧುನಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಎಂದು ಇನ್ನರ್‌ವೀಲ್ ಕ್ಲಬ್ ಚಾರ್ಟರ್ ಸದಸ್ಯೆ ಕ್ಷಮಾ ಮೆಹ್ತಾ ಹೇಳಿದರು.

ಸಮೀಪದ ಅಮಲಝರಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯಲ್ಲಿ ಸೋಮವಾರ ನಿಪ್ಪಾಣಿಯ ಇನ್ನರ್‌ವೀಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದರು. ಕ್ಲಬ್‌ನ 50ನೇ ವಾರ್ಷಿಕೋತ್ಸವದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು.

ಕ್ಲಬ್ ಅಧ್ಯಕ್ಷೆ ಶ್ರೇಯಾ ಖೇಡೇಕರ್, ಅರ್ಚನಾ ಬುರ್ಜಿ, ಸೀಮಾ ಬಾಗೇವಾಡಿ, ವರ್ಷಾ ನಂದರಗಿ, ಶ್ರುತಿ ಷಾ, ವೈಶಾಲಿ ಪಾಟೀಲ, ಸ್ಮಿತಾ ಷಾ, ಶ್ರೇಯಲ್ ಷಾ, ಸರೋಜ ಮಾನ್ವಿ, ಪಾಯಲ್ ಶಾ, ವೃಶಾಲಿ ದೇಶಮಾನೆ, ಅಶ್ವಿನಿ ಮೈತ್ರಾಣಿ, ನಿರ್ಮಲಾ ಚಂದ್ರಕುಡೆ ಇತರರು ಇದ್ದರು. ಪ್ರಾಚಾರ್ಯ ಕದ್ರಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net