ಆಧುನಿಕ ಬೇಸಾಯದಿಂದ ಆರ್ಥಿಕ ಲಾಭ

28-ANP-1 (1)
ಆನಂದಪಪುರ ಸಮೀಪದ ಇರುವಕ್ಕಿಯ ಕೃಷಿ ವಿವಿಯಲ್ಲಿ ಪ್ಲಾಂಟೇಷನ್ ಬೆಳೆಗಳ ಕೃಷಿ ಪದ್ಧತಿ ತರಬೇತಿ ಶಿಬಿರವನ್ನು ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಉದ್ಘಾಟಿಸಿದರು. ಡಾ. ಎಂ.ರವಿಕುಮಾರ, ಡಾ. ಜಿ.ಎನ್.ಮಂಜೇಶ್, ಡಾ. ಸದಾಶಿವ ನಡುಕೇರಿ ಇತರರಿದ್ದರು.
Published on

ಆನಂದಪುರ: ಆಧುನಿಕ ಬೇಸಾಯ ಪದ್ಧತಿಯಿಂದ ರೈತರು ಅಕ ಇಳುವರಿ ಪಡೆದು ಆರ್ಥಿಕ ಲಾಭ ಪಡೆಯಬಹುದು ಎಂದು ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಪ್ಲಾಂಟೇಷನ್ ಬೆಳೆಗಳ ಬೇಸಾಯ ಕುರಿತ ಮೂರು ದಿನಗಳ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಆಧುನಿಕ ಬೇಸಾಯ ಕುರಿತು ತಮ್ಮ ವಿಶ್ವವಿದ್ಯಾಲಯದಲ್ಲಿ ಎಲ್ಲ ಬಗೆಯ ತರಬೇತಿ, ಮಾರ್ಗದರ್ಶನ ಮತ್ತು ತಾಂತ್ರಿಕ ನೆರವು ನೀಡಲಾಗುತ್ತಿದೆ. ರೈತರು ಹೆಚ್ಚೆಚ್ಚು ಇವುಗಳ ಬಳಕೆ ಮಾಡಿಕೊಳ್ಳಬೇಕು ಎಂದರು.

ಕುಲಸಚಿವ ಡಾ. ಕೆ.ಸಿ.ಶಶಿಧರ ಮಾತನಾಡಿ, ಇಂದು ಕೃಷಿ ಚಟುವಟಿಕೆ ಎಲ್ಲ ಹಂತದ ಪ್ರಕ್ರಿಯೆಗೂ ಯಂತ್ರಗಳು ಮತ್ತು ಆಧುನಿಕ ವೈಜ್ಞಾನಿಕ ಉಪಕರಣಗಳಿವೆ. ಹತ್ತಾರು ಕೂಲಿಯಾಳುಗಳು ನಿರ್ವಹಿಸುವ ಕಾರ್ಯವನ್ನು ಒಂದು ಚಿಕ್ಕ ಯಂತ್ರ ಮಾಡಬಲ್ಲದು ಎಂದರು.

ಪ್ರಾಧ್ಯಾಪಕ ಡಾ. ಎಂ.ರವಿಕುಮಾರ್ ಮಾತನಾಡಿ, ವೈಜ್ಞಾನಿಕ ಕೃಷಿ ಪದ್ಧತಿಯಿಂದ ಸಮಗ್ರ ಕೀಟ ನಿರ್ವಹಣೆ ಸಾಧ್ಯ ಎಂದರು. ಪುತ್ತೂರಿನ ಗೇರು ಸಂಶೋಧನಾ ಸಂಸ್ಥೆ ವಿಜ್ಞಾನಿ ಡಾ. ಜಿ.ಎನ್.ಮಂಜೇಶ್ ಸಂಪನ್ಮೂಲ ವ್ಯಕ್ತಿಯಾಗಿ ಪ್ರಾಯೋಗಿಕ ತರಬೇತಿ ನೀಡಿದರು. ಶಿಬಿರದಲ್ಲಿ ಸಹ ಪ್ರಾಧ್ಯಾಪಕ ಡಾ. ಸದಾಶಿವ ನಡುಕೇರಿ, ಹಿರಿಯ ಕ್ಷೇತ್ರ ಅೀಕ್ಷಕ ಡಾ. ಬಸವರಾಜಪ್ಪ ಬೋಗಿ, ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಎಂ.ಹೊನ್ನಪ್ಪ ಮಾರ್ಗದರ್ಶನ ನೀಡಿದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ರೈತರಿಗೆ ಉಚಿತವಾಗಿ ಗೇರು ಸಸಿ ಮತ್ತು ಅಗತ್ಯ ಕೃಷಿ ಸಲಕರಣೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net