ಆದ್ಯತೆ ಮೇರೆಗೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

20 KRN-4
ಕೆ.ಆರ್.ನಗರದ ಹೊರ ವಲಯದ ಕಂಠೇನಹಳ್ಳಿ ಬಳಿ ಹಳೆ ರೈಲ್ವೆಹಳಿ ಸೇತುವೆ(ಅಕ್ವಿಡೆಕ್) ನಿರ್ಮಾಣಕ್ಕೆ ಶಾಸಕ ಸಾ.ರಾ.ಮಹೇಶ್ ಚಾಲನೆ ನೀಡಿದರು.
Published on


ಶಾಸಕ ಸಾ.ರಾ.ಮಹೇಶ್ ಹೇಳಿಕೆ


ಕೆ.ಆರ್.ನಗರ: ನಿರೀಕ್ಷೆಗೂ ಮೀರಿ ಮಳೆಯಾಗಿರುವುದರಿಂದ ರೈತರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅಗತ್ಯ ಕೆಲಸಗಳನ್ನು ತುರ್ತಾಗಿ ಮಾಡಿಸಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.

ಪಟ್ಟಣದ ಹೊರ ವಲಯದ ಕಂಠೇನಹಳ್ಳಿ ಬಳಿಯ ಚಾಮರಾಜ ಬಲದಂಡೆ ನಾಲೆಯ 9ನೇ ಬ್ರಾಂಚ್ ಬಳಿ ಹಳೇ ರೈಲ್ವೆ ಹಳಿ ಸೇತುವೆ (ಅಕ್ವಿಡೆಕ್) ನಿರ್ಮಾಣಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿರುವುದರಿಂದ ನಾಲೆಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಪರಿಣಾಮ ಕೆಲವು ನಾಲಾ ಏರಿಗಳು ಕುಸಿದು ಬಿದ್ದಿವೆ ಎಂದರು.

ರೈಲ್ವೆ ಹಳಿಯ ಮೇಲ್ಭಾಗದಲ್ಲಿದ್ದ ಕಾಲುವೆ ಗೋಡೆಗಳು ಕುಸಿದು ಬಿದ್ದಿದೆ. ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಮಾಡಿಸಿದ್ದು, 2.30 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದೇನೆ. ದುರಸ್ತಿಗಾಗಿ ರೈಲ್ವೆ ಇಲಾಖೆಯ ಅನುಮತಿ ಪಡೆಯಲಾಗಿದ್ದು, ಕುಸಿದಿರುವ ಕಾಲುವೆಗೆ ಡೆಕ್ ನಿರ್ಮಾಣ ಮಾಡಲು ಸಮಯಾವಕಾಶ ಬೇಕಾಗಿರುವುರಿಂದ ಈ ಭಾಗದ ರೈತರ ಬೆಳೆಗೆ ನೀರಿನ ಸಮಸ್ಯೆ ಉಂಟಾಗದಂತೆ ದೊಡ್ಡಗಾತ್ರದ ಪೈಪ್‌ಗಳನ್ನು ಅಳವಡಿಸಿ ತಾತ್ಕಾಲಿಕವಾಗಿ ನೀರು ಹರಿಸಲಾಗುವುದು ಎಂದರು.

ಹಾರಂಗಿ ಇಇ ಜಿ.ಜೆ.ಈರಣ್ಣನಾಯಕ, ಎಇಇ ಬಿ.ಜೆ.ಗುರುರಾಜ್, ಎಇ ಅಯಾಜ್, ಪುರಸಭಾ ಸದಸ್ಯ ಉಮೇಶ್, ಮಾಜಿ ಸದಸ್ಯ ಸಿರಾಜ್, ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಗುತ್ತಿಗೆದಾರ ಬಸವರಾಜ್, ಮುಖಂಡರಾದ ಚಿಕ್ಕವೀರು, ಹನಸೋಗೆ ನಾಗರಾಜ್, ವಿಷ್ಣು, ಸತ್ಯ, ವಿಶ್ವನಾಥ್, ರಾಘವೇಂದ್ರ, ಭಾಸ್ಕರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net