ಆದೇಶ ಪಾಲನೆ ಮಾಡದವರನ್ನು ಬಂಧಿಸಿ

sriram sene (1)
Published on

ಯಾದಗಿರಿ: ಸಮವಸ್ತ್ರ ಧರಿಸಿ ಶಾಲಾ, ಕಾಲೇಜಿಗೆ ಬರುವಂತೆ ಹೈಕೋರ್ಟ್​ ನೀಡಿದ ಮಧ್ಯಂತರ ಆದೇಶ ಪಾಲನೆ ಮಾಡದವರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.

ಸರ್ಕಾರದ ವಿರುದ್ಧ ಅಕ್ರಮವಾಗಿ ಧ್ವನಿ ಎತ್ತುತ್ತಿರುವ ದೇಶದ್ರೋಹ ಕೃತ್ಯ ಹೆಚ್ಚಾಗುತ್ತಿದ್ದು, ಹಿಜಾಬ್ ವಿವಾದ ಬೇಕಂತಲೆ ಸೃಷ್ಠಿಸಲಾಗಿದೆ. ರಾಜ್ಯದಲ್ಲಿ ಹಿಜಾಬ್ ಸಂಬಂಧಿಸಿದಂತೆ ಹಲವಾರು ಅಹಿತಕರ ಘಟನೆಗಳು ನಡೆಯುತ್ತಿವೆ. ಅಲ್ಲದೆ ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ಆದರೆ ಹಿಜಾಬ್ಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರಿಗೆ ಕೆಲವರು ಕುಮ್ಮಕ್ಕು ನೀಡುತ್ತಿರುವ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.

ಪ್ರತಿನಿತ್ಯ ಶಾಲಾ, ಕಾಲೇಜುಗಳ ಮುಂದೆ ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ. ತಕ್ಷಣವೇ ಸಕರ್ಾರ ಅಂಥವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಈ ವಿವಾದಕ್ಕೆ ತೆರೆ ಎಳೆದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಕಾಪಾಡಬೇಕು ಎಂದು ಆಗ್ರಹಿಸಿದರು.

ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಾಂಕ ನಾಯಕ, ಸಂದೀಪ ಮಹೇಂದ್ರಕರ್, ಸುಭಾಷ್ ದೇವದುರ್ಗ, ರಘುರಾಮ, ರಾಕೇಶ, ನಾಗು, ಸಾಬಣ್ಣ ಮುಂಡಗರಿ, ಬಸ್ಸು ರಾಮಕೋಟಿ, ಭೀಮು ಚವ್ಹಾಣ್ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net