ಆದಿವಾಸಿಗಳಿಗೆ ಮೆಡಿಕಲ್ ಕಿಟ್ ವಿತರಣೆ

12 yelandur 01
Published on

ಯಳಂದೂರು : ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟದ ಸಮೀಪದ ಕೆ.ಗುಡಿ ಬಳಿ ವಾಸವಿರುವ 50 ಆದಿವಾಸಿ ಕುಟುಂಬಗಳಿಗೆ ಸ್ಮೈಲ್ ಫಾರ್ ಯು ಫೌಂಡೇಶನ್ ವತಿಯಿಂದ ಮೆಡಿಕಲ್ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸ್ಥೆಯ ಅಧ್ಯಕ್ಷ ಸೈಯದ್ ಮಹಮ್ಮದ್ ಅಲಿ ಮಾತನಾಡಿ, ಬ್ಯಾಕ್ ಟು ನೇಚರ್ ಎಂಬ ಆಶಯದೊಂದಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ, ಪ್ರಕೃತಿಯ ಮಡಿಲಲ್ಲಿರುವ ಆದಿವಾಸಿ ಜನಾಂಗಗಳಿಗೆ ಸಹಾಯಹಸ್ತ ನೀಡುವುದು ನಮ್ಮ ಕರ್ತವ್ಯ ಎಂದರು.
ಸಂಸ್ಥೆಯ ಸಿಇಒ ಶುಭಾ, ಕಾರ್ಯದರ್ಶಿ ಸಿತಾರ ಎಂ. ಅಲಿ, ಉಪಾಧ್ಯಕ್ಷ ಸಂಜಿತ್ ಮಹಮ್ಮದ್ ಅಲಿ, ಪ್ರಮುಖರಾದ ಮನೋಜ್ ಕುಮಾರ್, ಅಶೋಕ್ ಕುಮಾರ್, ಧನಂಜಯ್, ಜಂಶೀರ್, ಲೋಕೇಶ್, ಉದಯ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net