ಆದಿ ಕರ್ನಾಟಕ ಬೋಡಿರ್ಂಗ್ ಹೋಂ ಮಕ್ಕಳ ಸ್ಥಳಾಂತರಕ್ಕೆ ಆಗ್ರಹ

ಆದಿ ಕರ್ನಾಟಕ ಬೋಡಿರ್ಂಗ್ ಹೋಂ ಮಕ್ಕಳ ಸ್ಥಳಾಂತರಕ್ಕೆ ಆಗ್ರಹ
Published on

ಹಾಸನ: ಶಿಥಿಲಾವಸ್ಥೆಯಲ್ಲಿರುವ ಆದಿ ಕರ್ನಾಟಕ ಬೋಡಿರ್ಂಗ್ ಹೋಂನ ಮಕ್ಕಳನ್ನು ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಶ್ರೀಧರ ಕಳಿವೀರ ಮಾತನಾಡಿ, ನೂರು ವರ್ಷಗಳ ಗಡಿ ದಾಟಿರುವ ಆದಿ ಕರ್ನಾಟಕ ಬೋಡಿರ್ಂಗ್ ಹೋಂ ಮಳೆಗಾಲದಲ್ಲಿ ಬೀಳುವ ಸ್ಥಿತಿಯಲ್ಲಿದೆ. ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳಾಂತರ ಮಾಡುವಂತೆ ಸಲಹೆ ನೀಡಿದ್ದಾರೆ. ಆದಾಗ್ಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ ಮಕ್ಕಳನ್ನು ಸ್ಥಳಾಂತರ ಮಾಡಿ ಅವರ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಜೈ ಭೀಮ್ ಬ್ರಿಗೇಡ್ ರಾಜೇಶ್, ವಿಜಿ ಕುಮಾರ್ ಬಾಗೆವಾಳು, ಹರೀಶ್, ಪ್ರದೀಪ್, ಜಗದೀಶ್, ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net