ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಡಿಟ್ ನಡೆಸಲು ಒತ್ತಾಯ

Published on

ಚಾಮರಾಜನಗರ: ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಡಿಟ್ ನಡೆಸಲು ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ನಿವೃತ್ತ ಲೆಕ್ಕ ಪರಿಶೋಧನಾಧಿಕಾರಿ, ಹಾಲಿಸಂಘದ ನಿರ್ದೇಶಕ ಕೆಂಪನಪುರ ಚನ್ನಬಸವಯ್ಯ ಆಗ್ರಹಿಸಿದರು.

ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದಿಂದ 2013 ರಿಂದ 2023 ರವರಗೆ 3.61 ಕೋಟಿ ರೂ.ಗಳ ವಹಿವಾಟು ನಡೆಸಲಾಗಿದೆ. ಅದು ಯಾವುದನ್ನು ಸಮರ್ಪಕವಾಗಿ ಆಡಿಟ್ ನಡೆಸಲಾಗಿಲ್ಲ. ಸ್ಥಳೀಯ ಲೆಕ್ಕಪರಿಶೋಧಕರಿಂದ ಆಡಿಟ್ ನಡೆಸಲು ಜಿಲ್ಲಾಧಿಕಾರಿಯವರು ಕ್ರಮವಹಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಆದಿ ಕರ್ನಾಟಕ ಅಭಿವೃದ್ದಿ ಸಂಘದ ನಿರ್ದೇಶಕರಾಗಿದ್ದ ಬಾಗಳಿ ಪುಟ್ಟಸ್ವಾಮಿ 1998 ನ.14 ರಂದು ನಿಧನ ಹೊಂದಿದ್ದಾರೆ. ಆದರೆ, ಸಂಘದ ನಿರ್ಣಯ ಪುಸ್ತಕದಲ್ಲಿ 2007ರವರೆಗೂ ಬಾಗಳಿ ಪುಟ್ಟಸ್ವಾಮಿ ಅವರ ಸಹಿ ಹಾಕಿರುವ ಬೆಳವಣಿಗೆ ನಡೆದಿದೆ. 2008 ರಿಂದ 2021 ರವರಗೆ ಮಾಸಿಕ 49 ಸಾವಿರ ರೂ,ಗಳಂತೆ 151 ತಿಂಗಳಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಬಾಡಿಗೆ ನೀಡಲಾಗಿದ್ದು, ಇದರಿಂದ ಸಂದಾಯವಾಗಿರುವ ಒಟ್ಟು 74.31 ಲಕ್ಷ ರೂ. ಬಿಸಿಎಂ ಇಲಾಖೆಯಿಂದ ಬಂದಿದ್ದ ಬಾಡಿಗೆ ಹಣ 75ಸಾವಿರ ರೂ. ಲೆಕ್ಕಕ್ಕೆ ಇಲ್ಲದಂತಾಗಿದೆ ಎಂದು ಹೇಳಿದರು.

ಇದಲ್ಲದೇ ಹರಿಜನ ವಿದ್ಯಾರ್ಥಿನಿಲಯವನ್ನು ವಿವಿಧ ಇಲಾಖೆಗಳಿಗೂ ಬಾಡಿಗೆ ನೀಡಲಾಗಿದೆ, ಸಿದ್ದಾರ್ಥ ಕಾಲೇಜಿಗೆ ಒಂದು ಬಾರಿ 1 ಲಕ್ಷ ರೂ. ಮತ್ತೊಂದು ಬಾರಿ 2 ಲಕ್ಷ ರೂ.ಗಳನ್ನು ಚೆಕ್ ಮೂಲಕ ನೀಡಲಾಗಿದೆ. ಯಾವುದೇ ಹಣಕಾಸಿನ ವ್ಯವಹಾರವನ್ನು ಸಂಘದಿಂದ ಸಮರ್ಪಕ ಆಡಿಟ್ ನಡೆಸಿಲ್ಲ. ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ದೂರು ನೀಡಿದರೂ, ಅವರು ಕ್ರಮಕೈಗೊಂಡಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net