

ಕಲಬುರಗಿ: ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ.ಜಾಧವ್ ಅವರ ಮನೆ, ಫರಹತಾಬಾದ್‌ನಲ್ಲಿರುವ ಫಾರ್ಮ್ ಹೌಸ್ ಮತ್ತು ಪಾಲಿಕೆಯಲ್ಲಿನ ಕಚೇರಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರಿಗೆ ಆದಾಯಕ್ಕಿಂತ ಶೇ.೧೪೦ ಹೆಚ್ಚು ಆಸ್ತಿ ಪತ್ತೆಯಾಗಿದೆ.
ಮಂಗಳವಾರ ಬೆಳ್ಳಂಬೆಳಗ್ಗೆ ಮೂರು ತಂಡದೊAದಿಗೆ ಪ್ರತ್ಯೇಕವಾಗಿ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾ ಪೊಲೀಸರು ಇಡೀ ದಿನ ಪರಿಶೀಲಿಸಿದರು. ನಗರದ ಎನ್‌ಜಿಒ ಕಾಲನಿಯ ಮನೆ, ಫರಹತಾಬಾದ್ ಸಮೀಪದ ಫಾರ್ಮ್ಹೌಸ್ ಮೇಲೆ ದಾಳಿ ನಡೆಸಿ, ದಾಖಲೆ, ಆಸ್ತಿ ಪಾಸ್ತಿ ಪರಿಶೀಲಿಸಿದರು.
ಪರಿಶೀಲನೆ ವೇಳೆ ಅಪಾರ ಪ್ರಮಾಣದ ಆಸ್ತಿ, ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಮನೆಯಲ್ಲಿ ಶೋಧ ನಡೆಸಿದ್ದು, ೧೫೦ ಗ್ರಾಂ ಬಂಗಾರ, ೩ ಕೆ.ಜಿ. ಬೆಳ್ಳಿ, ೩೩ ಲಕ್ಷ ರೂ. ಮೌಲ್ಯದ ಬಾಂಡ್, ಷೇರ್ ಪತ್ತೆಯಾಗಿದೆ. ಎನ್‌ಜಿಒ ಕಾಲನಿಯಲ್ಲಿ ಒಂದು ಮನೆ, ನಗರದಲ್ಲಿ ಎರಡು ಸೈಟ್, ಏಳು ಎಕರೆ ಜಮೀನು, ಫಾರ್ಮ್ಹೌಸ್, ಕಾರ್, ಬೈಕ್ ಪತ್ತೆಯಾಗಿದೆ ಎಂದು ಲೋಕಾ ಮೂಲಗಳು ತಿಳಿಸಿವೆ.
ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಬಿ.ಕೆ.ಉಮೇಶ ನೇತೃತ್ವದಲ್ಲಿ ಮೂರು ತಂಡ ದಾಳಿ ನಡೆಸಿದ್ದು, ಡಿವೈಎಸ್‌ಪಿ ಗೀತಾ ಬೇನಾಳ, ರಾಜಶೇಖರ ಹಳಿಗೋದಿ, ಇನ್‌ಸ್ಪೆಕ್ಟರ್‌ಗಳಾದ ಅರುಣ ಮುರುಗಂಡ, ಅಕ್ಕಮಹಾದೇವಿ ಸೇರಿ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.
ಪಾಲಿಕೆ ಕೇಂದ್ರಬಿAದು ಜಾಧವ್: ಆರ್.ಪಿ.ಜಾಧವ್ ಕಳೆದ ಹಲವು ವರ್ಷದಿಂದ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಉಪ ಆಯುಕ್ತರಾಗಿದ್ದಾರೆ. ಕಾರ್ಯಕ್ಕೆ ಸಹಕಾರ ನೀಡುತ್ತಿಲ್ಲ ವರ್ಗಾವಣೆ ಮಾಡಿ ಎಂದು ಇತ್ತೀಚೆಗೆ ಪಾಲಿಕೆ ಮಹಾಪೌರ ಯಲ್ಲಪ್ಪ ನಾಯ್ಕೋಡಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಸಿಎಂ ಸಲಹೆಗಾರ ಬಿ.ಆರ್.ಪಾಟೀಲ್ ಸಹ ಪತ್ರಿಕಾಗೋಷ್ಠಿಯಲ್ಲಿ ವರ್ಗಾವಣೆಗೆ ಆಗ್ರಹಿಸಿದ್ದರು. ಕಾಂಗ್ರೆಸ್‌ನ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಸಭೆಯೊಂದರಲ್ಲಿ ಜಾಧವ್‌ಗೆ ಕಟು ಶಬ್ಧಗಳಿಂದ ತರಾಟೆಗೆ ತೆಗೆದುಕೊಂಡಿದ್ದು ಚರ್ಚೆ ಆಗಿತ್ತು. ಪಾಲಿಕೆಯಲ್ಲಿ ಸದಾ ಸುದ್ದಿಯಲ್ಲಿ, ಕಾರ್ಯದಲ್ಲೂ ಆರ್.ಪಿ.ಜಾಧವ್ ಇರುವುದು ವಿಶೇಷ.