

ಕಲಬುರಗಿ: ಜನರ ಆದಾಯ ಹೆಚ್ಚಳವಾಗದೆ ಈ ಭಾಗದ ಪ್ರಗತಿ ಸಾಧ್ಯವಿಲ್ಲ. ಆದಾಯ ಹೆಚ್ಚಳವೇ ಅಭಿವೃದ್ಧಿಗೆ ಮುಖ್ಯ ಸಾಧನ ಎಂದು ಖನಾ ೌಂಡೇಷನ್, ಸ್ಕಾಟ್ಲ್ಯಾಂಡ್ ಹೆಲ್ತ್ಕೇರ್ನ ನರ‍್ದೇಶಕ ಡಾ.ಕ್ರಿಶ್ ಮರ‍್ತಿ ಹೇಳಿದರು.
ನಗರದ ಚೆಂಬರ್ ಆ್ ಕಾರ‍್ಸ್ ಸಭಾಂಗಣದಲ್ಲಿ ಕಲ್ಯಾಣ ರ‍್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಬುಧವಾರ ರ‍್ಪಡಿಸಿದ್ದ "ವಿಸನ್ ಾರ್ ಕಲಬುರಗಿ: ಜಾಗತಿಕ ದೃಷ್ಟಿಯಲ್ಲಿ ಕೈಗಾರಿಕೆ ಮತ್ತು ಶಿಕ್ಷಣದ ಪ್ರಗತಿ' ಕುರಿತ ಸಂವಾದಲ್ಲಿ ಮಾತನಾಡಿ, ಈ ಭಾಗದ ಜನತಾ ಆದಾಯ ಹೆಚ್ಚಳಕ್ಕೆ ಎಂಎನ್ಸಿ ಕಂಪನಿಗಳು ಬರಬೇಕು. ಆಗ ಉದ್ಯೋಗ ದೊರೆಯಲಿದೆ ಎಂದರು.
"ಮೇಕ್ ಕಲಬುರಗಿ ಗ್ರೇಟ್' ಧ್ಯೇಯ ವಾಕ್ಯದೊಂದಿಗೆ ಕೆಲಸ ಆರಂಭಿಸಿದ್ದು, ಉತ್ತಮ ಯೋಜನೆ ಹೊಂದಿದ ಪ್ರಸ್ತಾವನೆಗಳನ್ನು ಯುವ ಉದ್ಯಮಿಗಳು ಸಲ್ಲಿಸಿದರೆ ಅಂತಾರಾಷ್ಟ್ರೀಯ ಮಟ್ಟದಿಂದ ೨ರಿಂದ ೨೦ ಕೋಟಿ ರೂ.ವರೆಗೆ ಹೂಡಿಕೆ ಮಾಡಿಸಬಹುದು ಎಂದು ಭರವಸೆ ನೀಡಿದರು.
ಮಕ್ಕಳು ಬುದ್ಧಿವಂತರಿದ್ದು, ಅವರಿಗೆ ಪ್ರೌಢ ಶಾಲೆ ಹಂತದಲ್ಲೇ ತಂತ್ರಜ್ಞಾನ, ಹಾಸ್ಪಿಟಾಲಿಟಿ, ರ್ಸಿಂಗ್ನಂತ ತರಬೇತಿಗಳನ್ನು ನೀಡಬೇಕು. ವಿಶ್ವದಲ್ಲಿ ಈ ಮೂರು ವಿಭಾಗಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಕೌಶಲಯುತ ಯುವ ಪೀಳಿಗೆ ಸೃಷ್ಟಿ ನಮ್ಮ ಆದ್ಯತೆ ಆಗಬೇಕು ಎಂದರು.
ಕರ‍್ಯರ‍್ಶಿ ಶಿವರಾಜ ಇಂಗಿನಶೆಟ್ಟಿ ಮಾತನಾಡಿ, ನವೋದ್ಯಮ, ಕೈಗಾರಿಕೆ ಸ್ಥಾಪನೆಗೆ ಹೂಡಿಕೆ, ಇಚ್ಛಾಶಕ್ತಿ ಕೊರತೆ ಇದ್ದು, ಅದನ್ನು ನೀಗಿಸಲು ಕೆಕೆಸಿಸಿಐ ಶ್ರಮಿಸುತ್ತಿದೆ. ಮರ‍್ನಾಲ್ಕು ರ‍್ಷದಲ್ಲಿ ಇದರ ಲ ದೊರೆಯಲಿದೆ ಎಂದರು.
ನಿವೃತ್ತ ಡಿಎಚ್ಒ ಡಾ.ಬಾಬುರಾವ್ ಹುಡ್ಗಿಕರ್, ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ.ಪಪ್ಪಾ, ನಿಕಟಪರ‍್ವ ಅಧ್ಯಕ್ಷ ಶಶಿಕಾಂತ ಪಾಟೀಲ್, ದಿನೇಶ ಪಾಟೀಲ್, ರವೀಂದ್ರ ಮಾದಮಶೆಟ್ಟಿ, ಬಸವರಾಜ ಸೂಗೂರ, ರುನಾಥ ಗುರುನಂದನ, ದೊಡ್ಡಪ್ಪ ನಿಷ್ಠಿ, ಅಮಿತ್ ಮಾನೆ, ಅಮರನಾಥ ಪಪ್ಪಾ ಇತರರಿದ್ದರು.