

ಬಾಳೆಹೊನ್ನೂರು: ಆದರ್ಶ ನಗರ ಇಟ್ಟಿಗೆ-ಸೀಗೋಡಿನ ವಿದ್ಯಾಗಣಪತಿ ಸೇವಾ ಸಮಿತಿಯ 43ನೇ ಗಣೇಶೋತ್ಸವಕ್ಕೆ ಭಾನುವಾರ ವಿಜೃಂಭಣೆಯ ತೆರೆ ಬಿದ್ದಿತು. ಪಟ್ಟಣದ ಭದ್ರಾ ನದಿಯಲ್ಲಿ ಗಣೇಶ ವಿಗ್ರಹವನ್ನು ಜಲಸ್ತಂಭನಗೊಳಿಸಲಾಯಿತು.
ಐದು ದಿನಗಳ ಕಾಲ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ಸ್ಥಳೀಯರಿಂದ ನೃತ್ಯ ಕಾರ್ಯಕ್ರಮ, ಹಾಸ್ಯ ಸಂಜೆ, ಒಗಟು, ರಸಪ್ರಶ್ನೆ ಕಾರ್ಯಕ್ರಮಗಳು ನಡೆದವು. ಗಣೇಶೋತ್ಸವದ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ವ್ರತ ಆಯೋಜಿಸಲಾಗಿತ್ತು. ಕಡೆಯ ದಿನವಾದ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದೊಂದಿಗೆ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ಕಲಾವಿದ ಪ್ರಸಾದ್ ಆಚಾರ್ಯ ತಯಾರಿಸಿದ್ದ ವಿಗ್ರಹ ಆಕರ್ಷಣೀಯವಾಗಿತ್ತು. ಗಣೇಶನ ಮೆರವಣಿಗೆ ಸಾಗುವ ಇಟ್ಟಿಗೆ ಸೀಗೋಡು ಗ್ರಾಮದ ಮುಖ್ಯರಸ್ತೆಯಲ್ಲಿ ಸ್ಥಳೀಯರು ರಂಗೋಲಿಗಳನ್ನು ಹಾಕಿದ್ದರು. ಪಟ್ಟಣದ ಮುಖ್ಯಬೀದಿಯಲ್ಲಿ ನ್ಯೂ ಭರತ್ ಸೌಂಡ್ಸ್‌ನ ವಿಶೇಷ ಸಂಚಾರಿ ಗಾನವೈಭವ ಸೇರಿದಂತೆ ವಿವಿಧ ಆಕರ್ಷಣೀಯ ವಾದ್ಯಗಳಿದ್ದವು. ಮೆರವಣಿಗೆಯ ಮುಂಚೂಣಿಯಲ್ಲಿ ಸಮಿತಿ ಅಧ್ಯಕ್ಷ ಕಾರ್ತಿಕ್ ಕಾರಗದ್ದೆ, ಕಾರ್ಯದರ್ಶಿ ರವಿ ಶೆಟ್ಟಿ, ಉಪಾಧ್ಯಕ್ಷ ಸುಧೀರ್, ಪ್ರಮುಖರಾದ ಕೆ.ಪ್ರಶಾಂತ್‌ಕುಮಾರ್ ಎಸ್.ಕೆ.ವೆಂಕಟೇಶ್, ಹರೀಶ್, ಎಚ್.ಎಂ.ಪುರುಷೋತ್ತಮ್, ಶಿವಕುಮಾರ್, ಸುಧಾಕರ್, ರತ್ನಾಕರ್, ಮಹೇಶ್, ಸಂತೋಷ್, ವಿಘ್ನೇಶ್, ಜಗದೀಶ್ ಇತರರಿದ್ದರು.