ಆದರ್ಶ ಸಮಾಜ ನಿರ್ಮಾಣಕ್ಕೆ ಪ್ರೇರಣೆ

14sgr1
Published on

ಸಾಗರ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಸವಾಲುಗಳನ್ನು ಎದುರಿಸಿ ಯಶಸ್ಸಿನ ಕಡೆ ಸಾಗುತ್ತಿದ್ದಾರೆ ಎಂದು ಜಿಲ್ಲಾ ಐದನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾ„ೀಶೆ ಜಿ.ಪ್ರಭಾವತಿ ತಿಳಿಸಿದರು.

ಸಾಗರದ ನ್ಯಾಯಾಲಯದ ಆವರಣದಲ್ಲಿ ಸೋಮವಾರ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲ ಕ್ಷೇತ್ರಗಳನ್ನು ಗಮನಿಸಿದರೆ ಪ್ರತಿ ಹೆಜ್ಜೆಗೂ ಸಾಧನೆ ಮಾಡಿದ ಮಹಿಳೆಯರು ಸಿಗುತ್ತಾರೆ. ಶೇ.50ಕ್ಕಿಂತ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಗುರುತಿಸಿಕೊಂಡಿದ್ದಾರೆ. ಕುಟುಂಬದ ಹೊಣೆಗಾರಿಕೆ ಜತೆ ಸಾಮಾಜಿಕ ಜವಾಬ್ದಾರಿಯನ್ನೂ ಆಕೆ ಸಮರ್ಥವಾಗಿ ನಿಭಾಯಿಸಿ ಆದರ್ಶ ಸಮಾಜದ ನಿರ್ಮಾಣಕ್ಕೆ ಪ್ರೇರಣೆಯಾಗಿದ್ದಾಳೆ ಎಂದು ಹೇಳಿದರು.

ವಕೀಲೆ ಜಯಾ ಶ್ರೀನಿವಾಸ್, ಯುವ ಸಾಹಿತಿ ಶೀಲಾ ಅವರನ್ನು ಸನ್ಮಾನಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಇ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾ„ೀಶರಾದ ಶ್ರೀಶೈಲ ಭೀಮಸೇನಾ ಬಗಾಡಿ, ಸ್ಪರ್ಶ ಡಿಸೋಜ, ರೆಹನಾ ಸುಲ್ತಾನಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್, ಖಜಾಂಚಿ ಕಿರಣ್‍ಕುಮಾರ್, ಹಿರಿಯ ವಕೀಲ ಎಂ.ಎಸ್.ಗೌಡರ್, ಶಿಲ್ಪಾ, ಭಾರತಿ, ನಾಗಲಕ್ಷ್ಮಿ, ಪರಿಮಳಾ, ಶ್ರಾವ್ಯಾ, ಸೀಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net