

ಚಾಮರಾಜನಗರ : ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆಯಿತು.
ಬಾಲಕಿಯರ ಗುಂಡು ಎಸೆತ ಸ್ಪರ್ಧೆಯಲ್ಲಿ ಸೆಂಟ್‌ಜಾನ್ ಶಾಲೆಯ ಅನನ್ಯ, ನಿರ್ಮಲ ಕಾನ್ವೆಂಟ್ ಕನ್ನಡ ಮಾಧ್ಯಮದ ನಿವ್ಯಶ್ರೀ, ಎ ಎನ್‌ಎಸ್ ಶಾಲೆಯ ಸಾನಿಕ, ಬಾಲಕಿಯರ ಉದ್ದ ಜಿಗಿತದಲ್ಲಿ ಅಣ್ಣೂರು ಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಜ್ಯೋತಿ, ನಿರ್ಮಲ ಕಾನ್ವೆಂಟ್‌ನ ಕಾವ್ಯ, ಬನ್ನಿತಾಳಪುರ ಸರ್ಕಾರಿ ಪ್ರಾಥಮಿಕ ಶಾಲೆ ಹರ್ಷಿತ, ಬಾಲಕಿಯರ ಚಕ್ರ ಎಸೆತ ಸ್ಪರ್ಧೆಯಲ್ಲಿ ನಿರ್ಮಲ ಕಾನ್ವೆಂಟ್‌ನ ಉಮ್ಮೆ ಅಬಿಬಾ, ಬರಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಚಿಕ್ಕಮ್ಮಣಿ, ಆದರ್ಶ್ ವಿದ್ಯಾಲಯದ ಚಾರುಸ್ಮಿತ ವಿಜೇತರಾದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಪ್ರಶಸ್ತಿಗಳನ್ನು ನೀಡಲಾಯಿತು.