ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶ ಆರಂಭ

Published on

ಚಾಮರಾಜನಗರ: ಮಲ್ಲಯ್ಯನಪುರದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ 2025-26ನೇ ಸಾಲಿಗೆ 6ನೇ ತರಗತಿಯಲ್ಲಿ ಖಾಲಿ ಇರುವ ಪ್ರವೇಶಾತಿಗೆ ಕೌನ್ಸಿಲಿಂಗ್ ಮೂಲಕ ವಿದ್ಯಾರ್ಥಿಗಳ ಆಯ್ಕೆ ಆರಂಭಗೊಂಡಿದೆ.

ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಆಗಸ್ಟ್ 11 ಮತ್ತು 12ರಂದು, ಮೀಸಲಾತಿ ವರ್ಗದ ವಿದ್ಯಾರ್ಥಿಗಳಿಗೆ 13 ಮತ್ತು 14 ರಂದು ಕೌನ್ಸೆಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. 1, 2 ಮತ್ತು 3ನೇ ಸುತ್ತುಗಳಲ್ಲಿ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಪ್ರವೇಶ ಪರೀಕ್ಷೆ ಬರೆದಿರುವ ಉಳಿದ ವಿದ್ಯಾರ್ಥಿಗಳು 1:30 ಅನುಪಾತದಲ್ಲಿ ನಿಗದಿಪಡಿಸಿರುವ ದಿನಗಳಂದು ಬೆಳಗ್ಗೆ 10 ಗಂಟೆಗೆ ದಾಖಲಾತಿಗಳೊಡನೆ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.

ವಿದ್ಯಾರ್ಥಿಗಳು ನೀಡಿರುವ ದೂರವಾಣಿ ಸಂಖ್ಯೆಗೆ ಎಸ್.ಎಂ.ಎಸ್.ಮೂಲಕ ಸಂದೇಶವನ್ನು ಕಳುಹಿಸಲಾಗಿದೆ. ಮಾಹಿತಿಗೆ ಸಂಬಂಧಪಟ್ಟ ಪಾಲಕರು ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net