

ಕಲಬುರಗಿ: ನಗರದ ಆದರ್ಶ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು ದಿನದ ನಿಮಿತ್ತ ಭಾನುವಾರ ಪಾರ್ಶ್ವವಾಯು ಸೇರಿ ನರರೋಗಕ್ಕೆ ಸಂಬಂಧಿಸಿದಂತೆ ರೋಗಿಗಳಿಗೆ ಉಚಿತವಾಗಿ ತಪಾಸಣೆ ನಡೆಸಲಾಯಿತು. ಖ್ಯಾತ ನರರೋಗ ತಜ್ಞೆ ಡಾ.ಶ್ವೇತಾ ಅಲೋಕ ಪಾಟೀಲ್ ರೇವೂರ ಅವರು ಬೆಳಗ್ಗೆ ೧೧ರಿಂದ ಸಂಜೆ ೪ಗಂಟೆವರೆಗೆ ೮೦ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ, ಮಾತ್ರೆಗೆ ಸಲಹೆ ನೀಡಿದರು.
ಅಗತ್ಯ ಇರುವವರಿಗೆ ಶೇ.೫೦ ರಿಯಾಯಿತಿಯಲ್ಲಿ ಸ್ಕಾÈನಿಂಗ್ ಮಾಡಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲ ರೋಗಿಗಳಿಗೆ ಉಚಿತವಾಗಿ ರಕ್ತದೊತ್ತಡ, ಎಲುಬು, ನರ, ರಕ್ತ ತಪಾಸಣೆಯನ್ನು ಮಾಡಲಾಯಿತು. ವಿಶೇಷವಾಗಿ ನರದಲ್ಲಿ ತೊಂದರೆ ಉಂಟಾದವರಿಗೆ ನ್ಯೂರೋಪಥಿಯನ್ನು ಉಚಿತವಾಗಿ ತಪಾಸಿಸಲಾಯಿತು.
ಈ ವೇಳೆ ಮಾತನಾಡಿದ ಡಾ.ಶ್ವೇತಾ ಪಾಟೀಲ್, ಬೀದರ್, ಯಾದಗಿರಿ, ವಿಜಯಪುರ ಸೇರಿ ವಿವಿಧೆಡೆಯಿಂದ ಪಾರ್ಶ್ವವಾಯು ರೋಗಿಗಳು ಆಗಮಿಸಿದ್ದರು. ಎಲ್ಲರಿಗೂ ಸೂಕ್ತ ತಪಾಸಣೆ ನಡೆಸಿ, ಸಲಹೆ, ಮಾರ್ಗದರ್ಶನ ನೀಡಲಾಗಿದೆ. ವಿಶೇಷವಾಗಿ ಪಾರ್ಶ್ವವಾಯು ಸಂಬAಧಿಸಿದAತೆ ಗೋಲ್ಡನ್ ಅವರ್ ಬಗ್ಗೆ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.
ಆದರ್ಶ ಆಸ್ಪತ್ರೆಯಲ್ಲಿ ನಿರಂತರವಾಗಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ, ಕೈಗೆಟಕುವ ದರದಲ್ಲಿ ನೀಡುತ್ತಿದ್ದು, ಮಾಜಿ ಶಾಸಕರು, ಜನಪ್ರೀಯ ನೇತಾರರಾಗಿದ್ದ ಚಂದ್ರಶೇಖರ ಪಾಟೀಲರ ರೇವೂರ ಜನ್ಮದಿನ, ಪುಣ್ಯಸ್ಮರಣೆ, ಆಸ್ಪತ್ರೆಯ ವಾರ್ಷಿಕೋತ್ಸವ ಸೇರಿ ವಿವಿಧ ವಿಶೇಷ ದಿನಗಳಂದು ಶಿಬಿರ ಏರ್ಪಡಿಸಿ, ಜನ ಸೇವೆ ಮಾಡಲಾಗುತ್ತಿದೆ. ಜನರ ಆರೋಗ್ಯ ಕಾಪಾಡಲು ಆದ್ಯತೆ ನೀಡಲಾಗುತ್ತಿದೆ ಎಂದರು.
ಡಾ.ವಿದ್ಯಾಸಾಗರ ಪಾಟೀಲ್, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಇದ್ದರು.