ಆತ್ಮಹತ್ಯೆಗೆ ಯತ್ನಿಸಿದವನ ರಕ್ಷಣೆ

bnk blade
ಚಾರ್ಮಾಡಿ ಘಾಟ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಹಾಸನದ ಮನುವನ್ನು ರಕ್ಷಿಸಿದ 112 ಸಂಚಾರಿ ಪೋಲಿಸ್ ಸಿಬ್ಬಂದಿ ಬಿ.ಎಸ್.ಅಭಿಷೇಕ್, ದಿಲೀಪ್.
Published on

ಬಣಕಲ್: ಚಾರ್ಮಾಡಿ ಘಾಟ್‌ನ ಏಕಲವ್ಯ ಶಾಲೆ ಸಮೀಪ ರಸ್ತೆಯಲ್ಲಿ ಬ್ಲೇಡಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹಾಸನದ ಯುವಕನನ್ನು ಬಣಕಲ್ 112 ಸಂಚಾರಿ ಪೊಲೀಸರು ರಕ್ಷಿಸಿದ್ದಾರೆ.

ಹಾಸನದ ಮನು ಆತ್ಮಹತ್ಯೆಗೆ ಯತ್ನಿಸಿದ ಯುವಕ. ಸೋಮವಾರ ಸಂಜೆ ಮನು ಹಾಸನದಿಂದ ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಘಾಟ್ ಬಳಿ ಏಕಲವ್ಯ ಶಾಲೆ ಸಮೀಪದ ರಸ್ತೆಯಲ್ಲಿ ಕುತ್ತಿಗೆಯನ್ನು ಬ್ಲೇಡಿನಿಂದ ಕೊಯ್ದುಕೊಂಡು ಸ್ನೇಹಿತರಿಗೆ ವ್ಯಾಟ್ಸ್ ಆ್ಯಪ್ ಮೂಲಕ ವೀಡಿಯೋ ಸಂದೇಶ ಕಳುಹಿಸಿದ್ದಾನೆ. ತಕ್ಷಣ ಜಾಗೃತರಾದ ಸ್ನೇಹಿತರು 112 ಸಂಚಾರಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. 112 ಪೊಲೀಸರು ಚಾರ್ಮಾಡಿ ಘಾಟ್‌ಗೆ ತೆರಳಿ ಹರಸಾಹಸಪಟ್ಟು ಮನುವಿನಿಂದ ಬ್ಲೇಡ್ ಕಸಿದುಕೊಂಡು ಆತನನ್ನು ಕರೆತಂದು ಬಣಕಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಕುತ್ತಿಗೆಗೆ ವೈದ್ಯರಿಂದ ಹೊಲಿಗೆ ಹಾಕಿಸಿ ಪ್ರಾಣ ಉಳಿಸಿದರು. ಬಳಿಕ ಮನುನ ಪತ್ನಿಗೆ ಕರೆ ಮಾಡಿ ಕರೆಸಿ ಅವರೊಂದಿಗೆ ಕಳುಹಿಸಿಕೊಟ್ಟರು. ಆತ್ಮಹತ್ಯೆ ಯತ್ನಕ್ಕೆ ಕಾರಣ ತಿಳಿದಿಲ್ಲ.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಬಿ.ಎಸ್.ಅಭಿಷೇಕ್, ದಿಲೀಪ್, ಸುಂಕ ಭೋವಿ, ಓಂಕಾರ ನಾಯ್ಕ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net