

ಚಿತ್ರದುರ್ಗ: ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ಮನವಿ ಸಲ್ಲಿಸಿದರು.
ಚನ್ನರಾಯಪಟ್ಟಣ ತಾಲೂಕಿನ ಕತ್ರಘಟ್ಟ ಗ್ರಾಮದ ಮನೋಜ್ ಬಸವೇಶ್ವರ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ 2ನೇ ವರ್ಷದ ವ್ಯಾಸಂಗ ಮಾಡುತ್ತಿದ್ದ. ಜು. 31ರಂದು ಜೆಎಂಐಟಿ ಕ್ಯಾಂಪಸ್‌ನ ವಿದ್ಯಾರ್ಥಿನಿಲಯದ ಕೊಠಡಿಯಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದು, ಸೂಕ್ತ ಕಾರಣ ತಿಳಿದುಬಂದಿಲ್ಲ. ಹೀಗಾಗಿ ತನಿಖೆ ಕೈಗೊಂಡು ಸಾವಿಗೆ ನ್ಯಾಯ ಒದಗಿಸಬೇಕು ಎಂದು ಕೋರಿದರು.
ಎಬಿವಿಪಿ ಪದಾಧಿಕಾರಿಗಳಾದ ಗೋಪಿ, ಚಿತ್ರಸ್ವಾಮಿ, ಪಿ.ಕೆ.ಸುದೀಪ್, ಸಂಜಯ್, ನಿತೀಶ್, ಅನಿಲ್, ವರವೇಶ್, ಪ್ರಶಾಂತ್, ಅಪ್ಪು, ವೆಂಕಿ ಇತರರಿದ್ದರು.